×
Ad

​ಆಕಸ್ಮಿಕ ಬೆಂಕಿಗೆ 4 ಬಣವೆ ಸುಟ್ಟು ಭಸ್ಮ

Update: 2017-03-28 11:15 IST

ಗದಗ, ಮಾ.28: ಬರದ ಬೇಯ್ಗೆಗೆ ಬೆಂಡಾಗಿರುವ ಜಿಲ್ಲೆಯ ರೈತನಿಗೆ ಯಾವ ಶಾಪ ತಟ್ಟಿದೆಯೋ ಗೊತ್ತಿಲ್ಲ. ಒಂದರ ಮೇಲೊಂದು ಘಟನೆಗಳು ನಡೆಯುತ್ತಲೇ ಇವೆ. ನಿನ್ನೆ ರಾತ್ರಿ 4 ಬಣವೆಗೆ ಆಕಸ್ಮಿಕ ಬೆಂಕಿ ತಗುಲಿ ಸುಟ್ಟು ಭಸ್ಮವಾಗಿವೆ.

ಈ ಘಟನೆಯು ಗದಗ ತಾಲೂಕು ಬಳಗಾನೂರ ಗ್ರಾಮದ ಶೇಕಪ್ಪ ಕರಡ್ಡಿ ಹಾಗೂ ರಾಮಪ್ಪ ಕರಡ್ಡಿ ಅವರ  ಜಮೀನಿನಲ್ಲಿ ನಡೆದಿದೆ. ನಿನ್ನೆ ಮದ್ಯರಾತ್ರಿ ಘಟನೆ ಸಂಭವಿಸಿದ್ದು 4 ಬಣವೆ ಹಾಗೂ 3 ಎತ್ತಿನ ಬಂಡಿ ಸೇರಿದಂತೆ ಕೃಷಿಯ ಸಲಕರಣೆಗಳು ಬೆಂಕಿಗೆ ಆಹುತಿಯಾಗಿವೆ.
ಗ್ರಾಮದ ಗ್ರಾಮಸ್ಥರೇ ಬೆಂಕಿ ನಂದಿಸುವ ಕಾರ್ಯದಲ್ಲಿ ಮುಂದಾಗಿದ್ದು, ನೀರಿನ ಟ್ಯಾಂಕರ್ ಮೂಲಕ ಬೆಂಕಿಯನ್ನು ನಂದಿಸಿದ್ದಾರೆ. ಸುಮಾರು 2ಲಕ್ಷಕ್ಕೂ ಅಧಿಕ ಬೆಲೆಯ ಹಾನಿ ಸಂಭವಿಸಿದ್ದು ಗದಗ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News