'ನಮ್ಮ ಕ್ಯಾಂಟೀನ್ 'ಅಲ್ಲ ಇದರ ಹೆಸರು 'ಇಂದಿರಾ ಕ್ಯಾಂಟೀನ್’: ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ
Update: 2017-03-28 12:39 IST
ಬೆಂಗಳೂರು, ಮಾ.28: ಬಜೆಟ್ ನಲ್ಲಿ ಪ್ತಸ್ತಾಪಿಸಿರುವಂತೆ ಬಿಬಿಎಂಪಿಯ ಪ್ರತಿಯೊಂದು ವಾರ್ಡ್‌ಗಳಲ್ಲೂ ಪ್ರಾರಂಭಗೊಳ್ಳಲಿರುವ ತಮಿಳುನಾಡು ಮಾದರಿಯ 'ನಮ್ಮ ಕ್ಯಾಂಟೀನ್' ಮುಂದೆ 'ಇಂದಿರಾ ಕ್ಯಾಂಟೀನ್ 'ಆಗಿ ಕಾರ್ಯಾಚರಿಸಲಿದೆ ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಇಂದು ವಿಧಾನಸಭೆಯಲ್ಲಿ ಸ್ಪಷ್ಟಪಡಿಸಿದ್ದಾರೆ.
ಬಜೆಟ್ ಮೇಲಿನ ಚರ್ಚೆಯ ವೇಳೆ ಮಾತನಾಡಿದ ಅವರು ಬಿಬಿಎಂಪಿಯ 198 ವಾರ್ಡ್ ಗಳಲ್ಲೂ ಇಂದಿರಾ ಕ್ಯಾಂಟೀನ್ ಕಾರ್ಯಾಚರಿಸಲಿದೆ ಎಂದು ಹೇಳಿದರು.