ಮಲತಂದೆಯಿಂದಲೇ ಮಗಳ ಮೇಲೆ ಅತ್ಯಾಚಾರ
ಮಂಡ್ಯ, ಮಾ.28: ಮಲತಂದೆಯೇ ತನ್ನ ಮಗಳ ಮೇಲೆ ಅತ್ಯಾಚಾರವೆಸಗಿ ಪರಾರಿಯಾಗಿರುವ ಘಟನೆ ಕೆ.ಆರ್.ಪೇಟೆ ತಾಲೂಕು ಕೈಗೋನಹಳ್ಳಿಯಲ್ಲಿ ನಡೆದಿದೆ.
ತಿಪ್ಪೇಸ್ವಾಮಿ ಎಂಬ ವ್ಯಕ್ತಿಯೇ ಈ ಕೃತ್ಯವೆಸಗಿದ್ದು, ನಡೆದಿದ್ದು, ಆತನ ವಿರುದ್ಧ ಕೆ.ಆರ್.ಪೇಟೆ ಪೊಲೀಸರು ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಸಿಕೊಂಡು ಪತ್ತೆಗೆ ಬಲೆಬೀಸಿದ್ದಾರೆ.
ಪ್ರಸ್ತುತ ಕೈಗೋನಹಳ್ಳಿಯಲ್ಲಿ ಕೃಷಿಕಾರ್ಮಿಕರಾಗಿ ಕೆಲಸ ಮಾಡುತ್ತಿರುವ ಬೆಂಗಳೂರಿನ ಕೋರಮಂಗಲದ ಸರಿತಮ್ಮ (ಲಕ್ಷ್ಮಮ್ಮ) ಮತ್ತು ಆಂಜನಪ್ಪ ಅವರ ಪುತ್ರಿಯೇ ತಿಪ್ಪೇಸ್ವಾಮಿಯಿಂದ ಅತ್ಯಾಚಾರಕ್ಕೊಳಗಾಗಿರುವ ಅಪ್ರಾಪ್ತ ಬಾಲಕಿಯಾಗಿದ್ದಾಳೆ.
ಕೋರಮಂಗಲದ ಸರಿತಮ್ಮ, ತನ್ನ ಮೊದಲ ಪತಿ ತಿಪ್ಪೇಸ್ವಾಮಿಯನ್ನು ಹದಿನೈದು ವರ್ಷಗಳ ಹಿಂದೆ ತ್ಯಜಿಸಿ ಎರಡನೇ ಪತಿ ಆಂಜನಪ್ಪನೊಂದಿಗೆ ಕೈಗೋನಹಳ್ಳಿಯಲ್ಲಿ ಕೃಷಿಕೂಲಿಕಾರರಾಗಿ ಜೀವನ ಸಾಗಿಸುತ್ತಿದ್ದಾರೆ ಎನ್ನಲಾಗಿದೆ.
ಸೋಮವಾರ, ಕೈಗೋನಹಳ್ಳಿಯ ಸರಸಮ್ಮನ ಮನೆಗೆ ಬಂದ ತಿಪ್ಪೇಸ್ವಾಮಿ, ಮನೆಯಲ್ಲಿದ್ದ ಮಲಮಗಳ ಮೇಲೆ ಅತ್ಯಾಚಾರವೆಸಗಿ ಪರಾರಿಯಾಗಿದ್ದಾನೆ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಆರೋಪಿಸಲಾಗಿದೆ.
ತಿಪ್ಪೇಸ್ವಾಮಿ, ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿರುವ ಬಗ್ಗೆ ಠಾಣೆಯಲ್ಲಿ ದೂರು ದಾಖಲಾಗಿದ್ದು, ಬಾಲಕಿಯನ್ನು ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿಯನ್ನು ತಕ್ಷಣ ಬಂಧಿಸಿ ತನಿಖೆ ನಡೆಸಲಾಗುವುದು ಎಂದು ಸರ್ಕಲ್ ಇನ್ಸ್‌ಪೆಕ್ಟರ್ ಎಚ್.ಬಿ.ವೆಂಕಟೇಶಯ್ಯ ತಿಳಿಸಿದ್ದಾರೆ.