ಅಂಬೇಡ್ಕರ್ ಅಭಿವೃದ್ಧಿ ನಿಗಮ ಜಿಲ್ಲಾ ವ್ಯವಸ್ಥಾಪಕ ಸಹಿತ ಕಾರು ಚಾಲಕ ಎಸಿಬಿ ಬಲೆಗೆ

Update: 2017-03-28 18:05 GMT

ಶಿವಮೊಗ್ಗ, ಮಾ. 28: ವ್ಯಕ್ತಿಯೋರ್ವರಿಂದ 40 ಸಾವಿರ ರೂ. ಲಂಚ ಸ್ವೀಕರಿಸುತ್ತಿದ್ದ ವೇಳೆ ಡಾ. ಬಿ. ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಹಾಗೂ ಅವರ ಕಾರು ಚಾಲಕನನ್ನು ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸರು ಬಂಧಿಸಿದ ಘಟನೆ ಮಂಗಳವಾರ ಮಧ್ಯಾಹ್ನ ಶಿವಮೊಗ್ಗ ನಗರದಲ್ಲಿ ನಡೆದಿದೆ. ಜಿಲ್ಲಾ ವ್ಯವಸ್ಥಾಪಕ ಮಹದೇವಸ್ವಾಮಿ ಹಾಗೂ ಅವರ ಕಾರು ಚಾಲಕ ಕುಮಾರ್ ಬಂಧಿತರೆಂದು ಗುರುತಿಸಲಾಗಿದೆ. ಇವರ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆ - 1988ರ ಅಡಿ ಎಸಿಬಿ ಪೊಲಿೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಿವಮೊಗ್ಗ ತಾಲೂಕಿನ ಹೊಳೆಬೆನವಳ್ಳಿ ತಾಂಡದ ಚಾಲಕರೊಬ್ಬರು ಎಸ್ಸಿ-ಎಸ್ಟಿ ಅನುದಾನದಡಿ ಹೊಸ ಕಾರು ಖರೀದಿಗೆ ಮುಂದಾಗಿದ್ದರು. ಅಂಬೇಡ್ಕರ್ ಅಭಿವೃದ್ಧ್ದಿ ನಿಗಮಕ್ಕೆ ಅರ್ಜಿ ಕೂಡ ಸಲ್ಲಿಸಿದ್ದರು. 3.5 ಲಕ್ಷ ಸಬ್ಸಿಡಿ ಹಣ ಬಿಡುಗಡೆಗೆ 40 ಸಾವಿರ ರೂ. ಲಂಚ ನೀಡುವಂತೆ ಮಹದೇವಸ್ವಾಮಿ ದೂರುದಾರರಿಗೆ ತಿಳಿಸಿದ್ದರು. ಈ ಕುರಿತಂತೆ ದೂರುದಾರರು ಎಸಿಬಿ ಪೊಲೀಸರ ಗಮನಕ್ಕೆ ತಂದಿದ್ದರು.

ಅವರ ಸೂಚನೆಯಂತೆ ಮಂಗಳವಾರ ಮಧ್ಯಾಹ್ನ ನಗರದ ಜಯನಗರ ಪೊಲೀಸ್ ಠಾಣೆಯ ಸಮೀಪದ ಹೋಟೆಲ್‌ವೊಂದರ ಬಳಿ ಮಹದೇವಸ್ವಾಮಿ ಅವರು ತಮ್ಮ ಕಾರು ಚಾಲಕ ಕುಮಾರ್‌ನ ಮೂಲಕ 40 ಸಾವಿರ ರೂ. ಸ್ವೀಕರಿಸುತ್ತಿದ್ದಾಗ ಕಾರ್ಯಾಚರಣೆ ನಡೆಸಿದ ಎಸಿಬಿ ಪೊಲೀಸರು ಇಬ್ಬರನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News