×
Ad

ಈಶ್ವರಪ್ಪ-ಆಯನೂರು ಬಣಗಳ ನಡುವೆ ಶಿವಮೊಗ್ಗದಲ್ಲಿ ಪೋಸ್ಟರ್ ವಾರ್

Update: 2017-03-30 12:33 IST

ಶಿವಮೊಗ್ಗ,ಮಾ.30: ಯುಗಾದಿ ಹಬ್ಬದ ಶುಭಾಶಯ ಕೋರುವ ಪೋಸ್ಟರ್‌ಗೆ ಸಂಬಂಧಿಸಿ ಶಿವಮೊಗ್ಗ ಬಿಜೆಪಿಯ ಎರಡು ಬಣಗಳ ನಡುವೆ ಕಿತ್ತಾಟ ನಡೆದಿದೆ.

ಬಿಜೆಪಿ ಕಚೇರಿ ಮುಂಭಾಗ ಹಾಗೂ ನಗರದ ಇತರ ಕಡೆಗಳಲ್ಲಿ ಬಿಜೆಪಿ ವತಿಯಿಂದ ಹಾಕಲಾಗಿರುವ ಯುಗಾದಿ ಹಬ್ಬದ ಶುಭಾಶಯದ ಪೋಸ್ಟರ್‌ನಲ್ಲಿ ಕೆಎಸ್ ಈಶ್ವರಪ್ಪರ ಭಾವಚಿತ್ರವನ್ನು ಹಾಕಲಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿರುವ ಈಶ್ವರಪ್ಪರ ಬೆಂಬಲಿಗರು ಬಿಜೆಪಿಯ ಪೋಸ್ಟರ್‌ನ್ನು ಹರಿದುಹಾಕಿದ್ದಾರೆ. ಈಶ್ವರಪ್ಪ ಬೆಂಬಲಿಗರ ವರ್ತನೆಗೆ ಆಯನೂರು ಮಂಜುನಾಥ್ ಬೆಂಬಲಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈಶ್ವರಪ್ಪ ಶುಭಾಶಯ ಕೋರಿರುವ ಬ್ಯಾನರ್‌ರನ್ನು ಹರಿದುಹಾಕಿದ್ದಾರೆ. ಹೀಗಾಗಿ ಎರಡೂ ಬಣಗಳ ನಡುವೆ ಪೋಸ್ಟರ್ ವಾರ್ ಕಂಡುಬಂದಿದೆ.

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರದ ಟಿಕೆಟ್‌ಗಾಗಿ ಈಶ್ವರಪ್ಪ ಹಾಗೂ ಆಯನೂರು ಮಂಜುನಾಥ್ ಬಣದ ನಡುವೆ ನೇರ ಪೈಪೋಟಿ ಏರ್ಪಟ್ಟಿದೆ. ಆಯನೂರು ಮಂಜುನಾಥ್ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಬಣದಲ್ಲಿ ಗುರುತಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News