'ಕಾಂಗ್ರೆಸ್‌ನಿಂದ ನೋಟು ಪಡೆದು ಬಿಜೆಪಿಗೆ ವೋಟ್ ಹಾಕಿ'
Update: 2017-03-30 13:29 IST
ಮೈಸೂರು, ಮಾ.30: ಕಾಂಗ್ರೆಸ್ ಮುಖಂಡರಿಂದ ನೋಟು ಪಡೆಯಿರಿ. ಆದರೆ, ಮತವನ್ನು ಮಾತ್ರ ಬಿಜೆಪಿಗೆ ಹಾಕಿ ಎಂದು ವಿಧಾನಪರಿಷತ್‌ನ ವಿಪಕ್ಷ ನಾಯಕ ಕೆಎಸ್ ಈಶ್ವರಪ್ಪ ಕರೆ ನೀಡಿದ್ದಾರೆ. ಉಪ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿದ್ದ ಈಶ್ವರಪ್ಪ ಮತ್ತೊಮ್ಮೆ ನಾಲಗೆಯನ್ನು ಹರಿಯಬಿಡುವ ಮೂಲಕ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.
ಇಂಧನ ಸಚಿವ ಡಿ.ಕೆ. ಶಿವಕುಮಾರ್ ಪ್ರತಿ ಮತಕ್ಕೆ 4000 ರೂ.ಕೊಡುತ್ತಾರಂತೆ. ನೀವು ಕಾಂಗ್ರೆಸ್ ಮುಖಂಡರುಗಳು ನೀಡುವ ಹಣವನ್ನು ಸ್ವೀಕರಿಸಿ. ಆದರೆ, ಮತವನ್ನು ಮಾತ್ರ ತಪ್ಪದೇ ನಮ್ಮ ಪಕ್ಷಕ್ಕೆ ಹಾಕಬೇಕು’’ ಎಂದು ಈಶ್ವರಪ್ಪ ಚಿಕ್ಕಾಟಿ ಗ್ರಾಮದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯೊಂದರಲ್ಲಿ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.