ಜೂಜಾಟದ ಹಣ ಹಂಚಿಕೆ ಸಂಬಂಧ ಎರಡು ಗುಂಪುಗಳ ನಡುವೆ ಮಾರಾಮಾರಿ
Update: 2017-03-30 20:01 IST
ತುಮಕೂರು,ಮಾ.30:ಜೂಜಾಟದ ವೇಳೆ ಹಣ ಹಂಚಿಕೆ ಸಂಬಂಧ ಎರಡು ಗುಂಪುಗಳ ನಡುವೆ ಜಗಳ ನಡೆದು,ಪರಸ್ಪರ ಹೊಡೆದಾಡಿಕೊಂಡ ಘಟನೆ ಗುರುವಾರ ಸಂಜೆ ತುಮಕೂರು ನಗರದ ಕುರಿ ಪಾಳ್ಯದಲ್ಲಿ ನಡೆದಿದೆ.
ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸ್ ಯುಗಾದಿ ಹಬ್ಬದ ಅಂಗವಾಗಿ ಜೂಜಾಟವನ್ನು ಸಂಪೂರ್ಣ ನಿಷೇಧಿಸಿ ಆದೇಶ ಹೊರಡಿಸಿದ್ದರೂ ಇಂದು ಮನೆಯೊಂದರಲ್ಲಿ ಸೇರಿದ್ದ ಎರಡು ಗುಂಪುಗಳು ಜೂಜಾಟದಲ್ಲಿ ಬಂದ ಹಣ ಹಂಚಿಕೆ ಸಂಬಂಧ ವೈಮನಸ್ಸು ಉಂಟಾದ ಪರಿಣಾಮ ಜಗಳಕ್ಕೆ ತಿರುಗಿ ಎರಡು ಗುಂಪುಗಳು ಪರಸ್ಪರ ಮಾರಕಾಸ್ತ್ರಗಳಿಂದ ಹೊಡೆದಾಡಿಕೊಂಡಿದ್ದು,ಹಲವರು ಗಾಯಗೊಂಡಿದ್ದಾರೆ.
ವಿಷಯ ತಿಳಿದು ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಮತಿ ಇಶಾಪಂತ್ ನೇತೃತ್ವದಲ್ಲಿ ಎರಡು ಜಿಲ್ಲಾ ಶಸ್ತ್ರಾಸ್ತ ಮೀಸಲು ಪೊಲೀಸ್ ತುಕ್ಕಡಿ ಆಗಮಿಸಿ ಲಘು ಲಾಠಿ ಪ್ರಹಾರ ನಡೆಸಿದ್ದು, ಪರಿಸ್ಥಿತಿಯನ್ನು ತಹಬದಿಗೆ ತಂದಿದ್ದು, ಎಸ್.ಪಿ. ಅವರು ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಸ್ಥಳದಲ್ಲಿಯೇ ಮೊಕ್ಕಾಂ ಹೂಡಿದ್ದಾರೆ.