ನನ್ನ ಮೇಲೆ ಹಲ್ಲೆ ನಡೆದಿಲ್ಲ: ಬಸವರಾಜ್ ಸ್ಪಷ್ಟನೆ
ಚಿಕ್ಕಮಗಳೂರು, ಮಾ.30: ನಗರಸಭೆ ಅಧ್ಯಕ್ಷರ ಮೇಲೆ ಹಲ್ಲೆ ಆಗಿರುವ ವಿಷಯಕ್ಕೆ ಸಂಬಂಧಿಸಿ ವರಸಿದ್ಧಿ ವೇಣುಗೋಪಾಲ್ ಅವರು ಹೇಳಿಕೆ ನೀಡಿದ್ದು, ನನ್ನ ಅಧಿಕಾರದ ಅವಧಿಯಲ್ಲಿ ನನ್ನ ಮೇಲೆ ಯಾವುದೇ ಹಲ್ಲೆ ನಡೆದಿಲ್ಲ ಎಂದು ನಗರಸಭೆ ಮಾಜಿ ಅಧ್ಯಕ್ಷ ಎಲ್.ವಿ.ಬಸವರಾಜ್ ಸ್ಪಷ್ಟ ಪಡಿಸಿದ್ದಾರೆ.
ಈ ಕುರಿತು ಗುರುವಾರ ಪತ್ರಿಕಾ ಹೇಳಿಕೆ ನೀಡಿದ್ದು, ನನ್ನ ಅಧಿಕಾರವಧಿಯಲ್ಲಿ ಸಾರ್ವಜನಿಕರ ಅಭಿವೃದ್ಧಿ ದೃಷ್ಟಿಯಿಂದ ಹತ್ತು ಹಲವಾರು ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದ್ದು, ಯಾವ ಭ್ರಷ್ಟಾಚಾ ದ ಆರೋಪಗಳಿಲ್ಲದೆ ಅವಧಿ ಮುಗಿಸಿದ್ದೇನೆ. ನಗರಸಭೆಯ ಕಚೇರಿಯಲ್ಲಿ ಸಭೆ ನಡೆಯುವಾಗ ಆಡಳಿತ ಪಕ್ಷದ ಸದಸ್ಯ ಹಾಗೂ ವಿರೋಧ ಪಕ್ಷದ ಸದಸ್ಯರ ನಡುವೆ ಚರ್ಚೆ, ವಾಗ್ವಾದ ಆಗುವುದು ಸಹಜ ಇದನ್ನು ಬಿಜೆಪಿ ಅರಿತುಕೊಳ್ಳಲಿ ಎಂದಿದ್ದಾರೆ.
ನೂರಾರು ಸಾರ್ವಜನಿಕರ, ನಗರಸಭೆ ಸಿಬ್ಬಂದಿ ಹಾಗೂ ಕೆಲವು ಸದಸ್ಯರ ಎದುರಿನಲ್ಲೆ ಹಲ್ಲೇ ನಡೆದಿದ್ದು, ನೂರು ಸುಳ್ಳು ಹೇಳಿ ಸತ್ಯ ಮಾಡಲು ಹೊರಟಿರುವ ಬಿಜೆಪಿಯ ಮುಖಂಡರು ವಿಷಯಾಂತರ ಮಾಡದೆ ಸಾರ್ವಜನಿಕರಿಗೆ ಸ್ಟಷ್ಟೀಕರಣ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಈ ತರಹದ ಹೇಳಿಕೆಯನ್ನು ನೀಡಿ ಅಧ್ಯಕ್ಷರ ಋಣವನ್ನು ತೀರಿಸಲು ಹೊರಟಿದ್ದಾರೆ. ಇದರ ಬದಲು ಕ್ರಿಕೆಟ್ ಬೆಟ್ಟಿಂಗ್ ದಂಧೆೆ ಹಾಗೂ ಈ ತರಹದ ಮನೆ ಮುರುಕ ಕೆಲಸ ಮಾಡಿದವರು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ನಗರದ ಎಲ್ಲ ಜನತೆಯ ಪರವಾಗಿ ಒತ್ತಾಯಿಸುವುದಾಗಿ ತಿಳಿಸಿದ್ದಾರೆ.