ನಂಜನಗೂಡು ಉಪ ಚುನಾವಣೆಯ ಹಿನ್ನೆಲೆಯಲ್ಲಿ ಭುಗಿಲೆದ್ದ ರಾಜಕೀಯ ವೈಷಮ್ಯ
Update: 2017-03-31 10:32 IST
ನಂಜನಗೂಡು, ಮಾ.31: ನಂಜನಗೂಡು ಉಪಚುನಾವಣೆಯ ಹಿನ್ನೆಲೆಯಲ್ಲಿ ರಾಜೂರಿನಲ್ಲಿ ಹಿಂಸಾಚಾರ ಭುಗಿಲೆದ್ದಿದ್ದು, ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರು ಕಲ್ಲು ತೂರಾಟ ನಡೆಸಿದ ಘಟನೆ ವರದಿಯಾಗಿದೆ.
ಹಿಂಸಾಚಾರದಿಂದ ಇಬ್ಬರು ಗಾಯಗೊಂಡಿದ್ದಾರೆ.
ಕಲ್ಲು ತೂರಾಟದಿಂದಾಗಿ ಗಾಯಗೊಂಡಿರುವ ಬಸವರಾಜು ಮತ್ತು ಚಿನ್ನಮ್ಮ ಎಂಬವರನ್ನು ನಂಜನಗೂಡು ಆಸ್ಪತ್ರಗೆ ದಾಖಲಿಸಲಾಗಿದೆ.
ನಟ ಜಗ್ಗೇಶ್ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಲು ಆಗಮಿಸುವ ಸ್ವಲ್ಪ ಮೊದಲು ಹಿಂಸಾಚಾರ ಸಂಭವಿಸಿದೆ. ಹುಲ್ಲಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
,,,,,,,