ಕುರಿ ಕೊಟ್ಟಿಗೆಗೆ ಬೆಂಕಿ: ಟ್ರ್ಯಾಕ್ಟರ್ ಸುಟ್ಟು, ಓರ್ವನಿಗೆ ಗಾಯ
ಹುಳಿಯಾರು,ಮಾ.31:ಕುರಿ ಕೊಟ್ಟಿಗೆಗೆ ಬೆಂಕಿ ತಗುಲಿ ಟ್ರ್ಯಾಕ್ಟರ್ ಸುಟ್ಟು ಓರ್ವನಿಗೆ ಗಾಯವಾದ ಘಟನೆ ಹುಳಿಯಾರು ಸಮೀಪದ ನಂದಿಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಸೋಮಜ್ಜರ ಗಂಗಾಧರ್ ಎಂಬುವವರ ಕುರಿ ಮೇಕೆ ಕೊಟ್ಟಿಗೆಗೆ ಗುರುವಾರ ಮಧ್ಯರಾತ್ರಿ 2 ಗಂಟೆಯ ಸುಮಾರಿಗೆ ಆಕಸ್ಮಿಕ ಬೆಂಕಿ ತಗುಲಿದೆ. ಕೊಟ್ಟಿಗೆಯಲ್ಲಿ ಧರಣೇಶ್ ಎಂಬುವವರು ಮಲಗಿದ್ದು ಬೆಂಕಿ ಹೊತ್ತಿಕೊಂಡರೂ ಎಚ್ಚರವಾಗದೆ ಗಾಢ ನಿದ್ರೆಗೆ ಜಾರಿದ್ದರು.
ಎದುರು ಮನೆಯ ಬಸವರಾಜು ಮೂತ್ರವಿಸರ್ಜನೆಗೆ ಬಂದ ಸಂದರ್ಭದಲಿ ಕೊಟ್ಟಿಗೆಗೆ ಬೆಂಕಿ ಬಿದ್ದಿರುವುದು ಗಮನಕ್ಕೆ ಬಂದಿದೆ. ತಕ್ಷಣ ಧರಣೀಶ್ ಅವರನ್ನು ಎಚ್ಚರಗೊಳಿಸಿ ಇಬ್ಬರೂ ಕುರಿ ಮತ್ತು ಮೇಕೆಗಳನ್ನು ಕೊಟ್ಟಿಗೆಯಿಂದ ಬೇರೊಂದು ಕಡೆ ಸಾಗಿಸಿದ್ದಾರೆ.
ಅಷ್ಟರಲಿ ಬೆಂಕಿಯ ಕೆನ್ನಾಲಿಗೆ ಕೊಟ್ಟಿಗೆ ಮುಂಭಾಗ ನಿಲ್ಲಿಸಿದ್ದ ಟ್ರಾಕ್ಟರ್‌ಗೆ ಆವರಿಸಿದೆ. ಟ್ರ್ಯಾಕ್ಟರ್‌ನ ಬಟನ್ ಟೈರ್, ಸೀಟ್, ಇಂಜಿನ್ ಒತ್ತಿ ಉರಿದುದನ್ನು ಕಂಡು ಬಸವರಾಜು ಎಂಬುವವರು ಬೆಂಕಿ ಸ್ಥಳದಿಂದ ಟ್ರ್ಯಾಕ್ಟರ್ ತಗೆಯಲು ಮುಂದಾಗಿದ್ದಾರೆ. ಅಷ್ಟರಲ್ಲಿ ಬಸವರಾಜು ಅವರ ಎರಡು ತೊಡೆ, ಭುಜಕೆ ತ್ರೀರ್ವ ಗಾಯಗಳಾಗಿವೆ.
ತಕ್ಷಣ ಹುಳಿಯಾರು ಸರಕಾರಿ ಆಸ್ಪತ್ರೆಗೆ ಬಸವರಾಜು ಅವರನ್ನು ಚಿಕಿತ್ಸೆಗೆ ಕರೆತರಲಾಯಿತು. ನಂತರ ಅಗ್ನಿಶಾಮಕ ದಳ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಗ್ರಾಪಂ ಅದ್ಯಕ್ಷ ಎನ್.ಬಿ.ದೇವರಾಜು, ಗೌಡರು ಬಸವರಾಜು, ನಂದಿಶಪ್ಪ, ಮಲ್ಲೇಶಯ್ಯ, ಹನುಮೇಗೌಡ, ಹೂನ್ನಪ್ಪ, ಮುನಿಯಪ್ಪ, ನಾಗರಾಜು ಗ್ರಾಮಸ್ಥರು ಹಾಜರಿದ್ದರು.