×
Ad

ಸಿಎಂ ವಾಹನವನ್ನೇ ತಪಾಸಣೆ ಮಾಡಿದ ಪಿಎಸ್ಸೈ..!

Update: 2017-04-01 18:15 IST

ಗುಂಡ್ಲುಪೇಟೆ, ಎ.1: ಚುನಾವಣಾ ಪ್ರಚಾರಕ್ಕಾಗಿ ಮೈಸೂರಿನಿಂದ ಹೊರಟು ನಂಜನಗೂಡು ಮಾರ್ಗವಾಗಿ ಗುಂಡ್ಲುಪೇಟೆ ತಲುಪುತ್ತಿದ್ದ ಸಿಎಂ ಸಿದ್ದರಾಮಯ್ಯ ಅವರ ವಾಹನವನ್ನು ಹಿರಿಕಾಟಿ ಚೆಕ್‌ಪೋಸ್ಟ್ ಬಳಿ ಕರ್ತವ್ಯನಿರತ ಬೇಗೂರು  ಪಿಎಸ್ಸೈ ಕಿರಣ್ ಕುಮಾರ್ ತಪಾಸಣೆ ಮಾಡಿ ಮುಂದಿನ ಪ್ರಯಾಣಕ್ಕೆ ಅನುವು ಮಾಡಿಕೊಟ್ಟರು.

ಕಾಂಗ್ರೆಸ್ ಅಭ್ಯರ್ಥಿ ಗೀತಾ ಪರ ಮತಯಾಚಿಸಲು ಶನಿವಾರ ಸಿಎಂ ಗುಂಡ್ಲುಪೇಟೆ ತಾಲೂಕಿನ ವಿವಿಧ ಗ್ರಾಮಗಳಿಗೆ ರೋಡ್ ಶೋ ನಡೆಸಲು ತೆರಳುತ್ತಿದ್ದರು. ಈ ವೇಳೆ ಕಾರಿನ ಢಿಕ್ಕಿಯನ್ನು ತೆರೆದು ತಪಾಸಣೆ ಮಾಡಲಾಯಿತು.

ವಿಐಪಿಗಳ ವಾಹನ ತಪಾಸಣೆ ಮಾಡುತ್ತಿಲ್ಲ ಎಂಬ ದೂರು ಕೇಳಿಬಂದಿದ್ದ ಹಿನ್ನೆಲೆಯಲ್ಲಿ ಅಧಿಕಾರಿಗಳು ಚುರುಕುಗೊಂಡಿದ್ದರು. ಸ್ವತಃ ಸಿಎಂ ಕಾರನ್ನೇ ತಪಾಸಣೆ ನಡೆಸಿದ ಕಿರಣ್ ಕುಮಾರ್‌ಗೆ ಮೆಚ್ಚುಗೆ ವ್ಯಕ್ತವಾಯಿತು. ಸಿಎಂ ಕಾರು ತಪಾಸಣೆ ಮಾಡಲು ಸಹಕರಿಸಿ ನಂತರ ಮತಪ್ರಚಾರಕ್ಕೆ ತೆರಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News