ಕಿಡ್ನಿ ವೈಫಲ್ಯ: ಸಹಾಯಕ್ಕೆ ವಿನಂತಿ
ಸಾಗರ, ಎ.1 : ಹಣ್ಣಿನ ವ್ಯಾಪಾರಿಯಾಗಿ ಜೀವನ ನಡೆಸುತ್ತಿದ್ದ ನಗರದ ಎಸ್.ಎನ್. ನಗರದ ನಿವಾಸಿ 33 ವರ್ಷದ ಯೂಸುಫ್ ಅವರು ಕಿಡ್ನಿ ವೈಫಲ್ಯಕ್ಕೊಳಗಾಗಿದ್ದು, ತೀರಾ ಬಡತನದಲ್ಲಿರುವ ಅವರು ಕಿಡ್ನಿ ಟ್ರಾನ್ಸ್ ಪ್ಲಾಂಟೇಷನ್ ಸಂಬಂಧ ತಗುಲಲಿರುವ ಸುಮಾರು 8 ಲಕ್ಷ ರೂ.ಯಷ್ಟು ಖರ್ಚನ್ನು ಭರಿಸಲು ಅಶಕ್ತರಾಗಿದ್ದು ಸಾರ್ವಜನಿಕರು, ಸಾರ್ವಜನಿಕ ದತ್ತಿಗಳು ಸಹಾಯ ಮಾಡಲು ವಿನಂತಿಸಿದ್ದಾರೆ.
ಮೂರೂವರೆ ವರ್ಷಗಳ ಹಿಂದೆ ಕಿಡ್ನಿ ವೈಫಲ್ಯ ಕ್ಕೊಳಗಾಗಿರುವ ಯೂಸುಫ್ ಡಯಾಲಿಸಿಸ್ ಮಾಡಿಸಿ ಕೊಳ್ಳುತ್ತಿದ್ದಾರೆ. ಇತ್ತೀಚಿಗೆ ಆರೋಗ್ಯ ಬಿಗಡಾಯಿಸಿರುವ ಕಾರಣ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಗಾ ಗಿದ್ದಾರೆ. ಪತ್ನಿ ಹಾಗೂ ಆರು ವರ್ಷದ ಮಗನನ್ನು ಹೊಂದಿರುವ ಯೂಸುಫ್‌ರ ಚಿಕಿತ್ಸೆಗೆ ಸುಮಾರು 7.70 ಲಕ್ಷ ರೂ. ಬೇಕಾಗುತ್ತದೆ ಎಂದು ಅಂದಾಜಿಸಲಾಗಿದೆ.
ಸರಕಾರ ಇವರ ಚಿಕಿತ್ಸೆಗೆ 3.5 ಲಕ್ಷ ಹಣ ಮಂಜೂರು ಮಾಡಿದೆಯಾದರೂ ಯೂಸುಫ್ ಕುಟುಂಬ ಉಳಿದ ಮೊತ್ತವನ್ನು ಹೊಂದಿಸುವ ಸ್ಥಿತಿಯಲ್ಲಿಲ್ಲ. ಈ ಹಿನ್ನೆಲೆಯಲ್ಲಿ ದಾನಿಗಳು ಧನಸಹಾಯ ಒದಗಿಸಬೇಕು ಎಂದು ಮಣಿಪಾಲ್ ಆಸ್ಪತ್ರೆಯ ನೋಂದಣಿ ಸಂಖ್ಯೆ 2075907 ಮೂಲಕ ದಾಖಲಾಗಿರುವ ಯೂಸುಫ್ ವಿನಂತಿಸಿದ್ದಾರೆ.
ಅವರ ಬ್ಯಾಂಕ್ ಖಾತೆ ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನ ಕಂಬಳಿಕೊಪ್ಪ ಶಾಖೆಯಲ್ಲಿದ್ದು, ಅಕೌಂಟ್ ನಂಬರ್ 64174356338, ಐಎಫ್‌ಎಸ್‌ಸಿ ಕೋಡ್ ಎಸ್‌ಬಿಎಂವೈ0041164, ಈ ಖಾತೆಗೆ ಹಣ ಸಹಾಯವನ್ನು ಮಾಡಬೇಕೆಂದು ಯೂಸುಫ್ ಕೋರಿದ್ದಾರೆ.