×
Ad

ರಕ್ಷಣೆ ಕೋರಿ ಜಿಲ್ಲಾಧಿಕಾರಿಗೆ ಮನವಿ

Update: 2017-04-01 23:10 IST

ಚಿತ್ರದುರ್ಗ: ತಮ್ಮ ಮೇಲೆ ನಡೆದಿರುವ ಹಲ್ಲೆಯನ್ನು ಖಂಡಿಸಿ ಚಳ್ಳಕೆರೆ ತಾಲೂಕು ನಾಯಕನಹಟ್ಟಿ ಹೋಬಳಿಯ ತೊರೆಕೋಲಮ್ಮನಹಳ್ಳಿಯ ನೂರಾರು ದಲಿತರು ಶನಿವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಟನೆ ನಡೆಸಿ ಸೂಕ್ತ ರಕ್ಷಣೆ ಒದಗಿಸುವಂತೆ ಜಿಲ್ಲಾ ರಕ್ಷಣಾಧಿಕಾರಿ ಹಾಗೂ ಜಿಲ್ಲಾಧಿಕಾರಿಯವರಲ್ಲಿ ಮನವಿ ಮಾಡಿಕೊಂಡಿದ್ದಾರೆ.


ಶುಕ್ರವಾರ ರಾತ್ರಿ ಸುಮಾರು 8 ಗಂಟೆಯ ಹೊತ್ತಿಗೆ ಈ ಹಲ್ಲೆ ನಡೆದಿದ್ದು, ನಾಯಕ ಜನಾಂಗಕ್ಕೆ ಸೇರಿದ ಕೆಲವು ಮುಖಂಡರು ಈ ಕೃತ್ಯವನ್ನು ಎಸಗಿದ್ದಾರೆ ಎಂದು ಅವರು ದೂರಿದ್ದಾರೆ. ಮೊಬೈಲ್‌ನಲ್ಲಿ ತರುಣಿಯರ ಫೋಟೋ ತೆಗೆದಿರುವುದನ್ನು ಪ್ರಶ್ನಿಸಿದ್ದೇ ಹಲ್ಲೆಗೆ ಕಾರಣ ಎಂದು ದಲಿತ ಮುಖಂಡರು ಜಿಲ್ಲಾಧಿಕಾರಿಗೆ ವಿವರಿಸಿದ್ದಾರೆ. ಈ ಜನಾಂಗದ ಮುಖಂಡರು ದಲಿತ ಕಾಲನಿಗೆ ಆಗಾಗ ನುಗ್ಗಿ ಇದೇ ರೀತಿ ಹಲ್ಲೆ ದೌರ್ಜನ್ಯಗಳನ್ನು ನಡೆಸುತ್ತಾ ಬರುತ್ತಿ ದ್ದಾರೆ. ದಲಿತ ಹೆಣ್ಣು ಮಕ್ಕಳು ಬಹಿರ್ದೆಸೆಗೂ ಹೋಗುವಂತಿಲ್ಲ. ಯುವತಿುರು ಶಾಲಾ-ಕಾಲೇಜುಗಳಿಗೆ ನಿರ್ಭಯವಾಗಿ ಹೋಗುವಂತಿಲ್ಲ ಎಂದು ಅವರು ಅಳಲು ವ್ಯಕ್ತಪಡಿಸಿದರು.


ದಲಿತ ಸಂಘರ್ಷ ಸಮಿತಿ ರಾಜ್ಯ ಮುಖಂಡ ಎಂ.ಜಯಣ್ಣ, ಅಬ್ಬೇನಹಳ್ಳಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಆರ್.ಬಸಪ್ಪ, ನ್ಯಾಯವಾದಿಗಳಾದ ರುದ್ರಮುನಿ, ಮಹೇಶ್, ಮಾದಿಗ ಮಹಾಸಬಾದ ಹುಲ್ಲೂರು ಕುಮಾರ್, ಮಂಜ ಣ್ಣ, ಬಸಕ್ಕ, ಸಾವಿತ್ರಮ್ಮ, ಕಮಲಮ್ಮ, ಕೊಲ್ಲಮ್ಮ ಹಾಗೂ ದಲಿತ ಕೇರಿಯ ಯಜಮಾನರುಗಳು ಈ ಸಂದರ್ಭದಲ್ಲಿ ಹಾಜರಿದ್ದರು.

ದೂರವಾಣಿಯಲ್ಲಿ ಪಿಎಸ್ಸೈಗೆ ಸೂಚನೆ ನೀಡಿದ ರಕ್ಷಣಾಧಿಕಾರಿ
ಹಲ್ಲೆಗೊಳಗಾಗಿ ಭಯದಿಂದ ತತ್ತರಿಸಿರುವ ತೊರೆಕೋಲ ಮ್ಮನಹಳ್ಳಿಯ ನೂರಾರು ದಲಿತ ಹೆಣ್ಣು ಮಕ್ಕಳ ಕಷ್ಟವನ್ನು ಆಲಿಸಿದ ಜಿಲ್ಲಾ ರಕ್ಷಣಾಧಿಕಾರಿ ಅರುಣ್‌ರಂಗರಾಜನ್ ಸಂಜೆಯೊಳಗೆ ಆರೋಪಿಗಳನ್ನು ಬಂಧಿಸಬೇಕು ಇಲ್ಲವಾದರೆ ನಿನ್ನ ಮೇಲೆ ಶಿಸ್ತು ಕ್ರಮ ಕೈಗೊಳ್ಳುವುದಾಗಿ ನಾಯಕನಹಟ್ಟಿ ಠಾಣೆ ಸಬ್‌ಇನ್‌ಸ್ಫೆಕ್ಟರ್‌ಗೆ ಮೊಬೈಲ್‌ನಲ್ಲಿ ಎಚ್ಚರಿಸಿ ಗ್ರಾಮದಲ್ಲಿ ಯಾವುದೇ ಕಾರಣಕ್ಕೂ 

ಅಹಿತಕರ ಘಟನೆಗೆ ಅವಕಾಶ ಕೊಡದಂತೆ ಬಿಗಿ ಬಂದೋಬಸ್ತ್ ಏರ್ಪಡಿಸುವಂತೆ ಸೂಚಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News