ಚಿತ್ರದುರ್ಗ ಜಿಲ್ಲೆ ಬಂದ್ ಮುಂದೂಡಿಕೆ: ಕೆ.ಎಸ್. ನವೀನ್
ಚಿತ್ರದುರ್ಗ, ಎ.1: ಭದ್ರಾಮೇಲ್ದಂಡೆ ಕಾಮಗಾರಿ ವಿಳಂಬ ಹಾಗೂ ಚಿತ್ರದುರ್ಗ ಜಿಲ್ಲೆಯು ಮೂಲಸೌಲಭ್ಯಗಳಿಂದ ವಂಚಿತವಾಗಿರುವುದನ್ನು ವಿರೋಧಿಸಿ ಎ.3 ರಂದು ಕರೆ ನೀಡಿದ್ದ ಜಿಲ್ಲಾ ಬಂದ್‌ನ್ನು ಮುಂದೂಡಲಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಎಸ್.ನವೀನ್ ತಿಳಿಸಿದ್ದಾರೆ. ಭದ್ರಾಮೇಲ್ದಂಡೆ ಕಾಮಗಾರಿ ಬಗ್ಗೆ ಸಂಪೂರ್ಣ ಮಾಹಿತಿ ನೀಡುವಂತೆ ಮಾಹಿತಿ ಹಕ್ಕು ಅಧಿನಿಯಮದಡಿ ಅರ್ಜಿ ನೀಡಿದ್ದರೂ ಇದುವರೆಗೂ ಉತ್ತರ ನೀಡದೆ ಉದಾಸೀನ ತೋರಿ ಈಗ ನಾಲ್ಕು ಪುಟಗಳ ವರದಿ ನೀಡಿದ್ದು, ಅದರಲ್ಲಿ ಭದ್ರಾಮೇಲ್ದಂಡೆ ಯೋಜನೆ ಕಾಮಗಾರಿ 2019 ಕ್ಕೆ ಪೂರ್ಣಗೊಳ್ಳಲಿದೆ ಎಂದು ಭದ್ರಾ ಮೇಲ್ದಂಡೆ ಕಚೇರಿ ಅಧಿಕಾರಿ ತಿಳಿಸಿದ್ದಾರೆ.
ನೀರಾವರಿ ಯೋಜನೆಗೆ ಎಷ್ಟೆಷ್ಟು ಅನುದಾನ ಬಳಸಲಾಗಿದೆ. ಜಿಲ್ಲೆಯ ಎಷ್ಟು ಕೆರೆಗಳಿಗೆ ನೀರು ತುಂಬಿಸಲಾಗುವುದು ಎಂಬುದರ ಕುರಿತು ಸಂಪೂರ್ಣ ಮಾಹಿತಿ ತಿಳಿದುಕೊಳ್ಳಲು ಕಾಮಗಾರಿ ನಡೆಯುವ ಸ್ಥಳ ಪರಿಶೀಲಿಸಿ, ರೈತರು, ವಿವಿಧ ಸಂಘಟನೆಗಳು, ಸಾರ್ವಜನಿಕರೊಡಗೂಡಿ ಬೃಹತ್ ಹೋರಾಟ ನಡೆಸುವ ಸಲುವಾಗಿ ಮುಂದಿನ ದಿನಾಂಕವನ್ನು ತಿಳಿಸಲಾಗುವುದು ಎಂದು ಕೆ.ಎಸ್.ನವೀನ್ ಹೇಳಿದ್ದಾರೆ.