×
Ad

ತುಮಕೂರಿನಲ್ಲಿ ಭೂಕಂಪನ

Update: 2017-04-02 09:37 IST

ತುಮಕೂರು, ಎ.2: ಇಲ್ಲಿನ ಹುಳಿಯಾರು ಸುತ್ತಮುತ್ತಲ ಪ್ರದೇಶಗಳಲ್ಲಿ ಇಂದು ಮಂಜಾನೆ ಲಘು ಭೂಕಂಪನ ಸಂಭವಿಸಿದೆ. ಇದರಿಂದ ಸುತ್ತಮುತ್ತಲ ಹಳ್ಳಿಗಳ ಜನರು ಭಯಭೀತರಾಗಿದ್ದಾರೆ

ಇಂದು ಮುಂಜಾನೆ 5:30ರ ಸುಮಾರಿಗೆ ಈ ಘಟನೆ ಸಂಭವಿಸಿದೆ. ಗಾಣಧಾಳು ಕೇಂದ್ರೀಕರಿಸಿ ಉಂಟಾಗಿರುವ ಈ ಭೂಕಂಪನದ ತೀವ್ರತೆಯು ರಿಕ್ಟರ್ ಮಾಪಕದಲ್ಲಿ 2.9 ದಾಖಲಾಗಿದೆ.

ಹುಳಿಯಾರು, ಗಾಣಧಾಳು, ಯಗಚೀಹಳ್ಳಿ ದಸೂಡಿಯ ಸುತ್ತಮುತ್ತ ಭಾಗದಲ್ಲಿ ಲಘು ಭೂಕಂಪನಕ್ಕೆ ಅನುಭವಕ್ಕೆ ಬಂದಿದೆ. ಇದರಿಂದ ನಿದ್ದೆಗಣ್ಣಿನಲ್ಲಿದ್ದ ಜನರು ಕೆಲವೆಡೆ ಒಮ್ಮೆಲೇ ದಡಬಡಾಯಿಸಿ ಎದ್ದು ಮನೆಯಿಂದ ಹೊರಗೋಡಿದ್ದಾರೆ.

ಘಟನಾ ಸ್ಥಳಕ್ಕೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News