ದಾವಣಗೆರೆ: ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ ಆಗ್ರಹಿಸಿ ಯುವ ಜೆಡಿಎಸ್ ಅಹೋರಾತ್ರಿ ಧರಣಿ

Update: 2017-04-02 07:20 GMT

ದಾವಣಗೆರೆ, ಎ.2: ನಗರದ ಅಶೋಕ ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ ಆಗ್ರಹಿಸಿ ಯುವ ಜೆಡಿಎಸ್ ವತಿಯಿಂದ ಹಮ್ಮಿಕೊಂಡಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಭೇಟಿ ನೀಡಿ ಹೋರಾಟಕ್ಕೆ ಬೆಂಬಲ ಸೂಚಿಸಿದರು.

ಕಳೆದ 40 ವರ್ಷಗಳಿಂದ ನಗರದ ಸಾರ್ವಜನಿಕರು ಸಮಸ್ಯೆಯನ್ನು ಎದುರಿಸುತ್ತಿರುಮದನ್ನು ಅರಿತು, ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಹೋರಾಟದ ಮುಂದಿನ ಹೆಜ್ಜೆ ಕುರಿತು ಸಭೆೆ ಸೇರಿ ತೀರ್ಮಾನಿಸಬೇಕೆಂದು ದೇವೇಗೌಡರು ಕಾರ್ಯಕರ್ತರಿಗೆ ಸಲಹೆ ನೀಡಿದರು.

ಈ ಸಂದರ್ದಲ್ಲಿ ಹೋರಾಟದ ನೇತೃತ್ವ ವಹಿಸಿದ್ದ ಪಕ್ಷದ ಯುವ ಜಿಲ್ಲಾಧ್ಯಕ್ಷ ಜೆ.ಅಮಾನುಲ್ಲಾ ಖಾನ್, ಶಾಸಕ ಎಚ್.ಎಸ್.ಶಿವಶಂಕರ್, ಜಿಲ್ಲಾಧ್ಯಕ್ಷ ಚಿದಾನಂದಪ್ಪ, ಶೀಲಾ ನಾಯ್ಕ, ದಾಸ್ ಕರಿಯಪ್ಪ, ಗುಡ್ಡಪ್ಪ, ಮಂಜುಳಾ, ಟಿ.ಅಸ್ಗರ್, ಖಾದರ್ ಬಾಷಾ, ಎ.ಶ್ರೀನಿವಾಸ್, ಅಹ್ಮದ್ ಬಾಷಾ, ಗಣೇಶ್ ದಾಸ್ ಕರಿಯಪ್ಪ, ಹೂವಿನ ಮಡು ಚಂದ್ರಪ್ಪ, ಕೆ.ಹನೀಫ್, ಉಜ್ಜಜಿ ಹುಸೈನ್, ಠಾಕೂರ್, ಟಿ.ಮುಹಮ್ಮ್ಮದ್ ಗೌಸ್, ಅಂಜಿನಪ್ಪ, ಗೋಣಿವಾಡ ಮಂಜುನಾಥ್, ವೈ.ಎಂ.ಝಕರಿಯಾ ಸಾಬ್, ಜಿ.ಎಂ.ಬಾಷಾ, ಬಿಲಾಲ್, ಸೈಯದ್ ರಸೂಲ್ ಸಾಬ್, ಬಾಷಾ ಸಾಬ್, ಝಹೀರುದ್ದೀನ್ ಖಾನ್, ದಾದಾಪೀರ್, ಜಬರೇಝ್, ಹುಸೈನ್ ಖಾನ್, ಶಬೀರ್ ಸಾಬ್, ಫಾರೂಕ್, ಮಂಜುನಾಥ್, ರಫೀಕ್, ಜಬೀವುಲ್ಲಾ, ಅಲ್ಲಾಬಕ್ಷ್, ಮುಬಾರಕ್, ಟಿಪ್ಪು ಹಮಾಲರ ಸಂಘದ ಪದಾಧಿಕಾರಿಗಳು ಲಾಲ್ ಬಿ. ಮುಮ್ತಾಝ್ ಬಿ. ಸಾಹಿರಾ ಬಾನು ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News