ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿ ಅನಾರೋಗ್ಯದಿಂದ ಹುಲಿ ಸಾವು
Update: 2017-04-02 19:55 IST
ಗುಂಡ್ಲುಪೇಟೆ, ಎ.1: ಅನಾರೋಗ್ಯದಿಂದ ಬಳಲುತ್ತಿದ್ದ ಹುಲಿಯೊಂದು ಸಾವಿಗೀಡಾಗಿರುವ ಘಟನೆ ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿ ನಡೆದಿದೆ.
ಹುಲಿ ಯೋಜನೆಯ ಕುಂದಕೆರೆ ವಲಯಕ್ಕೆ ಸೇರಿದ ಲೊಕ್ಕೆರೆ ಬೀಟ್ ಬಳಿ ಭಾನುವಾರ ಬೆಳಗ್ಗೆ ಗಸ್ತು ಸಿಬ್ಬಂದಿಗೆ 10 ವರ್ಷ ವಯಸ್ಸಿನ ಗಂಡುಹುಲಿಯ ಕಳೇಬರ ಕಂಡುಬಂದಿದೆ.
ಪಶುವೈದ್ಯ ಡಾ.ನಾಗರಾಜು ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಕಳೇಬರವನ್ನು ಸುಟ್ಟುಹಾಕಲಾಯಿತು. ಕಾಲಿಗೆ ಉಂಟಾಗಿದ್ದ ಗಾಯದಿಂದ ಬೇಟೆಯಾಡಲಾಗದೆ ಆಹಾರದ ಕೊರತೆಯಿಂದ ಏಳೆಂಟು ದಿನಗಳ ಹಿಂದೆಯೇ ಹುಲಿ ಸಾವಿಗೀಡಾಗಿದೆ ಎಂದು ಅರಣ್ಯಾಧಿಕಾರಿಗಳು ಹೇಳಿದ್ದಾರೆ.
ಬಂಡಿಪುರ ಹುಲಿ ಯೋಜನೆಯ ನಿರ್ದೇಶಕ ಟಿ.ಹೀರಲಾಲ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎ.ಟಿ.ಪೂವಯ್ಯ, ವಲಯಾರಣ್ಯಾಧಿಕಾರಿ ಶಿವಾನಂದ ವಿ.ಮುಗದುಂ, ಹಿಮಗಿರಿ ವನ್ಯಜೀವಿ ಹಿತರಕ್ಷಣಾ ಸಂಸ್ಥಯ ರಘುರಾಂ ಭೇಟಿ ನೀಡಿ ಪರಿಶೀಲಿಸಿದರು.