ಬಿಸಿಲ ತಾಪಕ್ಕೆ ಓರ್ವ ಬಲಿ
Update: 2017-04-02 22:04 IST
ಗಂಗೊಳ್ಳಿ, ಎ.2: ಬಿಸಿಲ ತಾಪಕ್ಕೆ ಅಸ್ವಸ್ಥಗೊಂಡ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಮರವಂತೆ ಗ್ರಾಮದ ಮುದ್ದುಮಕ್ಕಿ ಎಂಬಲ್ಲಿ ಮೃತಪಟ್ಟಿದ್ದಾರೆ.
ಮೃತರನ್ನು ಮರವಂತೆ ಗ್ರಾಮದ ರಾಮಕೆರೆಯ ಕೃಷ್ಣ ದೇವಾಡಿಗ(60) ಎಂದು ಗುರುತಿಸಲಾಗಿದೆ.
ಇವರು ಮಾ.30ರಂದು ನಡೆದುಕೊಂಡು ಹೋಗುತ್ತಿದ್ದಾಗ ಬಿಸಿಲಿನ ತಾಪಕ್ಕೆ ಮುದ್ದುಮಕ್ಕಿ ಹಾಡಿಯ ಪಕ್ಕದ ರಸ್ತೆಯಲ್ಲಿ ಕುಸಿದು ಬಿದ್ದು ಮೃತಪಟ್ಟರು. ಇವರ ಮೃತದೇಹವು ಎ.1ರಂದು ಮಧ್ಯಾಹ್ನ ಪತ್ತೆಯಾಗಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.