ಕೆರೆಯ ಮೀನು ಹಿಡಿಯಲು ಬಲೆ ಹಾಕಿದವರು ಶಾಕ್ ಆದರು ಯಾಕೆ ಗೊತ್ತಾ..?
Update: 2017-04-02 22:14 IST
ಮಂಡ್ಯ, ಎ.2: ಮಂಡ್ಯ ಜಿಲ್ಲೆ ನಾಗಮಂಗಲ ಬಳಿ ಮೊದಲಹಳ್ಳಿ ಕೆರೆಯಲ್ಲಿ ರವಿವಾರ ಮೀನು ಹಿಡಿಯುವ ವೇಳೆ ಪತ್ತೆಯಾದ ಎಟಿಎಂ ಯಂತ್ರವೊಂದನ್ನು ಮೀನುಗಾರರು ಪೊಲೀಸರಿಗೆ ಒಪ್ಪಿಸಿದ್ದಾರೆ.
ದರೋಡೆಕೋರರು ಎಟಿಎಂ ಯಂತ್ರವನ್ನು ಕದ್ದು ತಂದು ಅದರಲ್ಲಿಯ ಹಣವನ್ನು ತೆಗೆದು ಯಂತ್ರವನ್ನು ಕೆರೆಗೆ ಎಸೆದು ಹೋಗಿದ್ದಾರೆ ಎನ್ನಲಾಗಿದ್ದು, ಸ್ಥಳಕ್ಕೆ ನಾಗಮಂಗಲ ಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.