×
Ad

​ಒಣ ಹುಲ್ಲಿಗೆ ಆಕಸ್ಮಿಕ ಬೆಂಕಿ: ಅಪಾರ ಹಾನಿ

Update: 2017-04-02 22:57 IST

ಮುಂಡಗೋಡ, ಎ.2: ದನಕರುಗಳಿಗಾಗಿ ಹಿತ್ತಲಲ್ಲಿ ಸಂಗ್ರಹಿಸಿಟ್ಟ ಭತ್ತದ ಒಣ ಹುಲ್ಲಿಗೆ ಆಕಸ್ಮಿಕವಾಗಿ ಬೆಂಕಿ ತಗಲಿ ಅಪಾರ ಹಾನಿಯಾದ ಘಟನೆ ತಾಲೂಕಿನ ಲಕ್ಕೋಳ್ಳಿ ಗ್ರಾಮದಲ್ಲಿ ನಡೆದಿದೆ.


  ಸುಟ್ಟಿರುವ ಹುಲ್ಲು ಭೀಮಪ್ಪ ವಡ್ಡರ ಎಂಬ ರೈತನಿಗೆ ಸೇರಿದ್ದಾಗಿದೆ ಎಂದು ತಿಳಿದು ಬಂದಿದೆ. ತನ್ನ ಮನೆಯ ಹಿತ್ತಲಲ್ಲಿ ಸಂಗ್ರಹಿಸಿಟ್ಟಿದ್ದ ಸುಮಾರು 3 ಎಕರೆ ಭತ್ತದ ಒಣ ಹುಲ್ಲಿಗೆ ಆಕಸ್ಮಿಕವಾಗಿ ಬೆಂಕಿ ತಗಲಿ ಸುಟ್ಟಿದೆ ಎನ್ನಲಾಗಿದೆ.


ಬರಗಾಲದಿಂದ ತತ್ತರಿಸಿದ ಇಂದಿನ ದಿನಗಳಲ್ಲಿ ದನಕರುಗಳಿಗೆ ಮೇವಿನ ಕೊರತೆ ಆಗದಂತೆ ಸಂಗ್ರಹಿಸಿಟ್ಟಿದ್ದ ಹುಲ್ಲಿಗೆ ಬೆಂಕಿ ತಗಲಿದೆ ಎನ್ನಲಾಗಿದೆ.
ಅಗ್ನಿಶಾಮಕ ದಳದವರು ಬೆಂಕಿಯನ್ನು ನಂದಿಸಲು ಪ್ರಯತ್ನಿಸಿದರು.

ಆದರೆ ನೀರಿನ ಕೊರತೆಯಿಂದ ಸಂಪೂರ್ಣವಾಗಿ ಬೆಂಕಿ ನಂದಿಸಲು ಸಹಕಾರಿಯಾಗದ ಹಿನ್ನೆಲೆಯಲ್ಲಿ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News