×
Ad

ರಾಜ್ಯ ಸರಕಾರ ಅಂದಾಜಿನ ಮೇಲೆ ನಡೆಯುತ್ತಿದೆ: ಎಸ್.ಎಂ.ಕೃಷ್ಣ

Update: 2017-04-03 14:37 IST

 ನಂಜನಗೂಡು, ಎ.3: ನಾನು ಕಳೆದ 55 ವರ್ಷಗಳಲ್ಲಿ ಹಲವು ಸರಕಾರ ನೋಡಿದ್ದೇನೆ. ಇದು ದೂರದೃಷ್ಟಿ ಇಲ್ಲದಿರುವ ಸರಕಾರ ಎಂದು ಸ್ಪಷ್ಟವಾಗಿದೆ.  ರಾಜ್ಯ ಸರಕಾರ ಅಂದಾಜಿನ ಮೇಲೆ ನಡೆಯುತ್ತಿದೆ. ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ಪಕ್ಷ ಎಲ್ಲಿದೆ ಎಂದು ಹುಡುಕಬೇಕಾದ ಪರಿಸ್ಥಿತಿಯಿದೆ ಎಂದು ಇತ್ತಿಚೆಗಷ್ಟೇ ಕಾಂಗ್ರೆಸ್‌ಗೆ ಕೈಕೊಟ್ಟು ಬಿಜೆಪಿ ಸೇರಿರುವ ಎಸ್.ಎಂ. ಕೃಷ್ಣ ಹೇಳಿದ್ದಾರೆ.

 ಕಾಂಗ್ರೆಸ್ ಸಭೆಯಲ್ಲಿ ನಾನು ಅಹಂ ಬ್ರಹ್ಮಾಸ್ಮಿ ಎಂದು ಹೇಳಿದ್ದೆ. ಯಾವುದೇ ಅಧಿಕಾರದ ಆಸೆಯಿಂದ ನಾನು ಬಿಜೆಪಿ ಸೇರಿಲ್ಲ. ರಾಜ್ಯಸಭೆ ಸದಸ್ಯ ಸ್ಥಾನದ ಮೇಲೂ ಕಣ್ಣಿಟ್ಟಿಲ್ಲ. ರಾಜ್ಯದಲ್ಲಿ ರಾಜಕೀಯ ಧ್ರುವೀಕರಣವಾಗುತ್ತಿದೆ. ಇನ್ನ್ನೂ ಕೆಲವು ಬದಲಾವಣೆಯಾಗಬಹುದು. ಆದರೆ, ಅಂಬರೀಷ್ ಬಿಜೆಪಿ ಸೇರುವ ಬಗ್ಗೆ ನನಗೆ ಮಾಹಿತಿಯಿಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News