ಪೊಲೀಸ್ ವಾಹನದಲ್ಲಿ ಕಾಂಗ್ರೆಸ್ ಹಣ ಸಾಗಣೆ: ಯಡಿಯೂರಪ್ಪ ಆರೋಪ
ಗುಂಡ್ಲುಪೇಟೆ, ಎ.3: ಕಾಂಗ್ರೆಸ್ ಪಕ್ಷದವರು ಚುನಾವಣೆಯಲ್ಲಿ ಗೆಲ್ಲಲು ವಾಮ ಮಾರ್ಗವನ್ನು ಅನುಸರಿಸುತ್ತಿದ್ದು, ಪೊಲೀಸ್ ವಾಹದಲ್ಲಿ ಮತದಾರರಿಗೆ ಹಂಚಿಕೆ ಮಾಡಲು ಹಣ ಸಾಗಿಸುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಗಂಭೀರವಾಗಿ ಆರೋಪಿಸಿದ್ದಾರೆ.
ಅವರು ಗುಂಡ್ಲುಪೇಟೆಯಲ್ಲಿ ಭಾರತೀಯ ಜನತಾಪಾರ್ಟಿಯಿಂದ ಹಮ್ಮಿಕೊಂಡಿದ್ದ ಭಾರಿ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡಿ, ನಾವು ಇಲ್ಲಿ ಮತದಾರರೊಂದಿಗೆ ಮತ ಕೇಳಲು ಬಹಿರಂಗ ಸಭೆ ನಡೆಸುತ್ತಿದ್ದಾರೆ ಅಲ್ಲಿ ಕಾಂಗ್ರೆಸ್ ಪಕ್ಷದವರು ಅಭ್ಯರ್ಥಿ ಗೆಲ್ಲಿಸಲು ಪೊಲೀಸ್ ಭದ್ರತೆಯಲ್ಲೇ ಹಣವನ್ನು ಹಂಚುತ್ತಿದ್ದಾರೆ ಇದು ಅವರ ಸಂಸ್ಕೃತಿಯಾಗಿದೆ. ಚುನಾವಣಾಧಿಕಾರಿಗಳಿಗೆ ಮತ್ತು ಪೊಲೀಸ್ ಹಿರಿಯ ಅಧಿಕಾರಿಗಳಿಗೆ ಇದು ತಿಳಿದಿಲ್ಲವೇ ತಿಳಿದು ಮೌನವಾಗಿದ್ದಾರೆಯೇ ಎಂದು ಪ್ರಶ್ನೆ ಮಾಡಿದರು.
ಗುಂಡ್ಲುಪೇಟೆಯಲ್ಲಿ ಪಕ್ಷದ ವತಿಯಿಂದ ಹಮ್ಮಿಕೊಂಡಿರುವ ಸಮಾವೇಶಕ್ಕೆ ಜನರು ಸ್ವಯಂ ಪ್ರೇರಣೆಯಿಂದ ಬರುತ್ತಿದ್ದಾರೆ ಆದರೆ ಮಾರ್ಗ ಮದ್ಯೆ ಪೊಲೀಸರು ಅವರನ್ನು ತಡೆದು ಬಂಧಿಸಿ ಕರೆದೊಯ್ಯುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.