ಸಿಡಿಲು ಬಡಿದು 29 ಕುರಿಗಳ ಸಾವು. ಒರ್ವನಿಗೆ ಗಂಭೀರ ಗಾಯ
Update: 2017-04-03 21:15 IST
ತುಮಕೂರು, ಎ.3: ತುಮಕೂರು ಜಿಲ್ಲೆಯ ಸಿರಾ ತಾಲ್ಲೂಕು ಬುಕ್ಕಾಪಟ್ಟಣ ಹೋಬಳಿ ಜೋಗಯ್ಯನಪಾಳ್ಯದಲ್ಲಿ ಬೇವಿನಮರಕ್ಕೆ ಸಿಡಿಲು ಬಡಿದು 29 ಕುರಿಗಳು ಸಾವನ್ನಪ್ಪಿದ್ದು, ಕುರಿಗಾಹಿ ಜಯಣ್ಣ ಎಂಬವರು ಪರಿಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.
ಮಳೆ ಬರುತ್ತಿದ್ದಾಗ ಬೇವಿನ ಮರದ ಕೆಳಗೆ ನಿಂತಿದ್ದ ಜಯಣ್ಣ, ತಮ್ಮ ಕುರಿಗಳನ್ನು ಆಸ್ರಯಕ್ಕಾಗಿ ನಿಲ್ಲಿಸಿದ್ದರು. ಈ ವೇಳೆ ಸಿಡಿಲು ಬಡಿದು 29 ಕುರಿಗಳು ಸಾವನ್ನಪ್ಪಿದರೆ, 12 ಕುರಿಗಳಿಗೆ ಗಾಯಗಳಾಗಿವೆ. ಜಯಣ್ಣರ ಪರಿಸ್ಥಿತಿ ಗಂಭೀರವಾಘಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.