ಸಿಂಡಿಕೇಟ್ ಬ್ಯಾಂಕ್ ಎಟಿಎಂ ಕಳುವು ಯತ್ನ; ಆರೋಪಿ ಬಂಧನ
Update: 2017-04-03 22:13 IST
ಭಟ್ಕಳ, ಎ.3: ನಗರದ ನೆಹರು ರಸ್ತೆಯಲ್ಲಿರುವ ಸಿಂಡಿಕೇಟ್ ಬ್ಯಾಂಕಿನ ಎಟಿಎಂ ಯಂತ್ರ ಕಳುವು ಯತ್ನದ ಆರೋದಡಿ ನಗರಠಾಣೆಯ ಪೊಲೀಸರು ಓರ್ವ ವ್ಯಕ್ತಿಯನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.
ಸಿಂಡಿಕೇಟ್ ಬ್ಯಾಂಕಿನ ವ್ಯವಸ್ಥಾಪಕರು ನೀಡಿದ ದೂರಿನನ್ವಯ ತನಿಖೆ ಕೈಗೊಂಡ ಪೊಲೀಸರು ಎ.ಟಿ.ಎಂ. ಯಂತ್ರದ ಬಳಿ ಇರುವ ಸಿ.ಸಿ.ಟಿವಿ ಕ್ಯಾಮರಾದ ಫೋಟೇಜ್ ಆದರಿಸಿ ವ್ಯಕ್ತಿಯನ್ನು ಬಂಧಿಸಿದ್ದಾಗಿ ತಿಳಿದುಬಂದಿದೆ.
ಬಂಧಿತನನ್ನು ಸೋಡಿಗದ್ದೆಯ ನಿವಾಸಿ ರಾಘವೇಂದ್ರ ಗಣಪತಿ ಮೊಗೇರ್(19) ಎಂದು ಗುರುತಿಸಲಾಗಿದೆ. ಬಂಧಿತ ಆರೋಪಿ ಮಾ.29 ರಂದು ಎಟಿಎಂ ಯಂತ್ರವನ್ನು ಡ್ಯೂಪ್ಲಿಕೇಟ್ ಚಾವಿ ಹಾಗೂ ಕಟಿಂಗ್‌ಪ್ಲೆಯರ್ ಬಳಸಿ ಯಂತ್ರ ಕಳುವು ಮಾಡಲು ಪ್ರಯತ್ನಿಸುತ್ತಿರುವ ದೃಶ್ಯ ಸಿಸಿ ಟಿವಿ ಕ್ಯಾಮರಾ ಫೋಟೇಜ್ ನಲ್ಲಿ ದಾಖಲಾಗಿದೆ. ಇದರ ಸುಳಿವನ್ನು ಆಧರಿಸಿ ಸೋಮವಾರದಂದು ಆರೋಪಿಯನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.