×
Ad

​ಯುವತಿ ನಾಪತ್ತೆ

Update: 2017-04-03 22:53 IST

ಚಿಕ್ಕಮಗಳೂರು, ಎ.3: ಯುವತಿಯೋರ್ವಳು ಕಾಣೆಯಾಗಿರುವ ಕುರಿತು ನಗರದ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ.
 ನಗರದ ಹಿರೇಕೊಳಲೆ ರಸ್ತೆಯ ಉಪ್ಪಳ್ಳಿ ವಾಸಿ ಕು. ಹರ್ಷಿಯಾ ಬಾನು(19) ಎಂಬಾಕೆ ಕಾಣೆಯಾಗಿದ್ದಾಳೆ. ಕು.ಹರ್ಷಿಯಾಬಾನು ಚಿಕ್ಕಮಗಳೂರಿನ ಎಸ್‌ಟಿಜೆ ಕಾಲೇಜಿನಲ್ಲಿ ದ್ವಿತೀಯ ಬಿ.ಎ. ವಿದ್ಯಾರ್ಥಿನಿಯಾಗಿದ್ದು, ಮಾ.30ರಂದು ಬೆಳಗ್ಗೆ 10:30 ಗಂಟೆಗೆ ಮನೆಯಿಂದ ಹೊರಗೆ ಹೋದಾಕೆ ಹಿಂತಿರುಗಿ ಬಂದಿಲ್ಲ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ.

ಚಹರೆ ಈ ರೀತಿ ಇದೆ: ಗೋಧಿ ಮೈ ಬಣ್ಣ, ಕೋಲು ಮುಖ, ಕಪ್ಪು ತಲೆ ಕೂದಲು, 5.5 ಅಡಿ ಎತ್ತರ, ಉರ್ದು, ಬ್ಯಾರಿ, ಕನ್ನಡ ಮತ್ತು ಇಂಗ್ಲಿಷ್ ಭಾಷೆಯನ್ನು ಮಾತನಾಡುವವರಾಗಿದ್ದು, ಮನೆಯಿಂದ ಹೊರಟಾಗ ನೀಲಿ ಬಣ್ಣದ ಚೂಡಿದಾರ್, ಬುರ್ಖಾ ಧರಿಸಿರುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಚಿಕ್ಕಮಗಳೂರಿನ ಮಹಿಳಾ ಪೋಲಿಸ್ ಠಾಣೆಗೆ ಅಥವಾ ದೂ.ಸಂ: 08262-222836, 235608, 9449743983ನ್ನು ಸಂಪರ್ಕಿಸಿ ಮಾಹಿತಿ ನೀಡಬಹುದಾಗಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News