ನಿಧನ
Update: 2017-04-03 22:54 IST
ತರೀಕೆರೆ, ಎ.3: ಪಟ್ಟಣದ ಸದಾನಂದ ಕ್ಲಿನಿಕ್‌ನಲ್ಲಿ ವೈದ್ಯರಾಗಿದ್ದ ಡಾ. ಕರುಣಾಕರ ಹೆಗ್ಡೆ(88) ರವಿವಾರ ಬೆಳಗ್ಗೆ 10 ಗಂಟೆಗೆ ಶ್ರೀರಾಮ ಬಡಾವಣೆಯ ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ.
ಮೂಲತಃ ಮಂಗಳೂರಿನವರಾಗಿದ್ದ ಇವರು ಸುಮಾರು 60 ವರ್ಷಗಳ ಕಾಲ ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಬಡವರ ಡಾಕ್ಟರ್ ಎಂದೇ ಪರಿಚಿತರಾಗಿದ್ದರು.
ಮೃತ ವೈದ್ಯರು ಪತ್ನಿ ವಸಂತಿ ಹೆಗ್ಡೆ, ಇಬ್ಬರು ಗಂಡು, ಇಬ್ಬರು ಹೆಣ್ಣು ಮಕ್ಕಳು ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆಯನ್ನು ಸೋಮವಾರ ಬೆಳಗ್ಗೆ 9ಗಂಟೆಗೆ ಸ್ವಗ್ರಾಮ ಮಂಗಳೂರು ಜಿಲ್ಲೆಯ ಮೂಲ್ಕಿ ತಾಲೂಕಿನ ಐಕಾಳ ಗ್ರಾಮದ ತಮ್ಮ ತೋಟದಲ್ಲಿ ನೆರವೇರಿಸಲಾಗಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.