×
Ad

ಮುಖ್ಯಮಂತ್ರಿಯಿಂದ ಸೂಕ್ತ ಕ್ರಮದ ಭರವಸೆ : ಯು.ಟಿ.ಖಾದರ್

Update: 2017-04-05 19:59 IST

ಚಾಮರಾಜನಗರ , ಎ.5: ಮಂಗಳೂರಿನಲ್ಲಿ ಅಹ್ಮದ್ ಖುರೇಷಿ ಎಂಬ ವ್ಯಕ್ತಿಯ ಮೇಲೆ ನಡೆದಿದೆ ಎಂದು ಆರೋಪಿಸಲಾಗಿರುವ ಪೊಲೀಸ್ ದೌರ್ಜನ್ಯ ಪ್ರಕರಣದ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿಯಾಗಿ ವಿವರ ನೀಡಿದ್ದು, ಘಟನೆಯ ಬಗ್ಗೆ ವರದಿ ತರಿಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವ ಭರವಸೆಯನ್ನು ಮುಖ್ಯಮಂತ್ರಿ ನೀಡಿದ್ದಾರೆ ಎಂದು ಆಹಾರ ಮತ್ತು ನಾಗರೀಕ ಪೂರೈಕೆ ಸಚಿವ ಯು ಟಿ ಖಾದರ್ ಹೇಳಿದ್ದಾರೆ.

ಚಾಮರಾಜನಗರದ ಅಂಗಳ ಎಂಬಲ್ಲಿ ಚುನಾವಣಾ ಪ್ರಚಾರಕ್ಕೆ ಬಂದಿದ್ದ ಸಂದರ್ಭದಲ್ಲಿ ನಾನು, ಶಾಸಕ ಮೊಯ್ದಿನ್ ಬಾವಾ, ದಕ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ  ಘಟಕದ ಅಧ್ಯಕ್ಷ ಎನ್ ಎಸ್ ಕರೀಂ, ತಾಪಂ ಅಧ್ಯಕ್ಷ ಮೊಹಮ್ಮದ್ ಮೋನು ಮತ್ತಿತರರ ನಿಯೋಗ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಮಂಗಳೂರು ಘಟನೆಯ ಕುರಿತು ಸಂಪೂರ್ಣ ವಿವರ ನೀಡಿದ್ದೇವೆ. ಅದಕ್ಕೆ ಸ್ಪಂದಿಸಿದ ಮುಖ್ಯಮಂತ್ರಿಗಳು ಘಟನೆಯ ಕುರಿತು ಇಲಾಖೆಯಿಂದ ಸಮಗ್ರ ವರದಿ ತರಿಸಿ ಪೊಲೀಸರಿಂದ ತಪ್ಪಾಗಿದ್ದರೆ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಮಾಡುತ್ತೇನೆ ಎಂದು ಹೇಳಿದ್ದಾರೆ ಎಂದು ಖಾದರ್ ವಾರ್ತಾ ಭಾರತಿಗೆ ಮಾಹಿತಿ ನೀಡಿದರು.

ಘಟನೆಯ ಕುರಿತು ಗೃಹ ಸಚಿವ ಡಾ. ಪರಮೇಶ್ವರ್ ಅವರಿಗೂ ಮಾಹಿತಿ ನೀಡಿದ್ದು ಅವರೂ ಈ ಬಗ್ಗೆ ಗಮನ ಹರಿಸಿ ಪರಿಶೀಲಿಸಿ , ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದ್ದಾರೆ ಎಂದು ಖಾದರ್ ತಿಳಿಸಿದರು . 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News