×
Ad

ಲೋಕಾಯುಕ್ತ ಕಚೇರಿಯಲ್ಲೇ ಲಂಚ !

Update: 2017-04-06 21:26 IST

ಬೆಂಗಳೂರು, ಎ.6: ಭ್ರಷ್ಟರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿದ್ದ ಲೋಕಾಯುಕ್ತ ಕಚೇರಿಯಲ್ಲೇ ಲಂಚಕ್ಕೆ ಬೇಡಿಕೆಯಿಟ್ಟಿದ್ದ ಆರೋಪ ಕೇಳಿಬಂದಿದ್ದು, ಕರ್ನಾಟಕ ಲೋಕಾಯುಕ್ತದ ಪ್ರಧಾನ ಕಚೇರಿಯಲ್ಲಿರುವ ಜಡ್ಜ್‌ಮೆಂಟ್ ರೈಟರ್ ಸುಂಕಣ್ಣ ಲಂಚ ಸ್ವೀಕಾರ ವೇಳೆ ಎಸಿಬಿ ಬಲೆಗೆ ಬಿದ್ದಿದ್ದಾರೆ.

ಪೊಲೀಸ್ ಪೇದೆಯೊಬ್ಬರು ಆರೋಪದಿಂದ ಮುಕ್ತಗೊಳಿಸಲು ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವ ಪ್ರಮಾಣ ಪತ್ರಕ್ಕೆ ಪೇದೆ ಅವರ ಬಳಿ ಸಂಕಣ್ಣ 34 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂದು ತಿಳಿದು ಬಂದಿದೆ.

ಇದರಲ್ಲಿ 25 ಸಾವಿರ ರೂಪಾಯಿ ಮುಂಗಡವಾಗಿ ಗುರುವಾರ ಪಡೆಯುತ್ತಿದ್ದ ವೇಳೆ ಎಸಿಬಿ ದಾಳಿ ನಡೆಸಿದಾಗ ಲೋಕಾಯುಕ್ತದ ಪ್ರಧಾನ ಕಚೇರಿಯಲ್ಲಿರುವ ಜಡ್ಜ್‌ಮೆಂಟ್ ರೈಟರ್ ಸುಂಕಣ್ಣ ಲಂಚ ಸ್ವೀಕಾರ ಮಾಡುತ್ತಿರುವುದು ಬೆಳಕಿಗೆ ಬಂದಿದೆ ಎಂದು ಎಸಿಬಿ ಮೂಲಗಳು ತಿಳಿಸಿವೆ.

ಪ್ರಕರಣ ಸಂಬಂಧ ಆರೋಪಿ ಸುಂಕಣ್ಣ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆ-1988 ಅಡಿ ಮೊಕದ್ದಮೆ ದಾಖಲಿಸಿ ತನಿಖೆ ಮುಂದುವರೆಸಲಾಗಿದೆ.

ಏಜೆಂಟ್‌ನಿಂದ ಲಂಚ?

ಪ್ರಕರಣವೊಂದರ ಬಗ್ಗೆ ಸುಳ್ಳು ವರದಿ ಮಾಡಲು ಲಂಚ ಕೇಳಿದ್ದ ಆರೋಪಿ ಸುಂಕಣ್ಣ, ಈ ಸಂಬಂಧ ಬಳ್ಳಾರಿಯಲ್ಲಿ ಈತನ ಏಜೆಂಟ್ ಮೂಲಕ 25 ಸಾವಿರ ರೂ. ಲಂಚ ಪಡೆದಿದ್ದ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News