​ಕೊಡಗಿನಲ್ಲಿ ಆಲಿಕಲ್ಲು ಸಹಿತ ಮಳೆ

Update: 2017-04-06 17:18 GMT

ಮಡಿಕೇರಿ ಎ.6: ಜಿಲ್ಲಾ ಕೇಂದ್ರ ಮಡಿಕೇರಿ ಸೇರಿದಂತೆ ಸುತ್ತಮುತ್ತಲ ಗ್ರಾಮೀಣ ಪ್ರದೇಶಗಳಲ್ಲಿ ಗುರುವಾರ ಸಂಜೆ ಆಲಿಕಲ್ಲು ಸಹಿತ ಸಿಡಿಲು ಗುಡುಗಿನೊಂದಿಗೆ ಭಾರೀ ಮಳೆೆ ಸುರಿಯುವ ಮೂಲಕ ಉರಿಬಿಸಿಲ ಬೇಗೆಗೆ ತಂಪನ್ನೆರದಿದೆ.


ಕಳೆದ ಕೆಲವು ದಿನಗಳಿಂದ ಮಡಿಕೇರಿ ವ್ಯಾಪ್ತಿಯಲ್ಲಿ ಮೋಡದ ವಾತಾವರಣ ಕಂಡು ಬರುತ್ತಿತ್ತಾದರೂ, ಉತ್ತಮ ಮಳೆೆಯಾಗಿರಲಿಲ್ಲ. ಇಂದು ಸಂಜೆ ಅಂದಾಜು ಅರ್ಧಗಂಟೆ ಕಾಲ ಆಲಿಕಲ್ಲು ಸಹಿತ ಸಿಡಿಲು ಗುಡುಗಿನೊಂದಿಗೆ ಉತ್ತಮ ಮಳೆೆ ಸುರಿಯಿತು.


 ಏಕಾಏಕಿ ಸುರಿದ ಮಳೆಯಿಂದಾಗಿ ನಗರದಲ್ಲಿ ಸಾರ್ವಜನಿಕರ ಮತ್ತು ವಾಹನಗಳ ಸಂಚಾರಕ್ಕೆ ಅಡಚಣೆಯುಂಟಾಯಿತು. ನಗರದ ಸುತ್ತಮುತ್ತಲಿನ ಗ್ರಾಮೀಣ ಭಾಗಗಳಲ್ಲೂ ಮಳೆಯಾಗಿರುವ ಬಗ್ಗೆ ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News