×
Ad

​ಅಮೆಝಾನ್ ಕಂಪೆನಿಗೆ 11,500 ರೂ. ದಂಡ

Update: 2017-04-06 22:54 IST

 ಕಾರವಾರ, ಎ.6: ಮೊಬೈಲ್ ನೀಡುವುದಾಗಿ ನಂಬಿಸಿ ಮುಂಗಡ ಹಣ ಪಡೆದು ಮೋಸ ಮಾಡಲು ಯತ್ನಿಸಿದ ಅಮೆಝಾನ್ ಕಂಪೆನಿಗೆ ಉತ್ತರ ಕನ್ನಡ ಜಿಲ್ಲಾ ಗ್ರಾಹಕ ನ್ಯಾಯಾಲಯ 11,500 ರೂ. ದಂಡ ವಿಧಿಸಿದೆ.


ಅಮೆಝಾನ್ ವೆಬ್‌ಸೈಟ್‌ನಲ್ಲಿ 7, 500 ರೂ. ಬೆಲೆಯ ಕೂಲ್‌ಪಾಡ್ ನೋಟ್ ತ್ರೀ ಎಂಬ ಮೊಬೈಲ್‌ನ್ನು 5,599 ರೂ.ಗೆ ನೀಡುವುದಾಗಿ ಅಮೆಝಾನ್ ಪ್ರಕಟಿಸಿತ್ತು. 2016 ಜುಲೈ 20ರಂದು ಈ ಜಾಹಿರಾತನ್ನು ಗಮನಿಸಿದ್ದ ಅಚ್ಯುತಕುಮಾರ ಎಂಬವರು ಮೊಬೈಲ್ ಬುಕ್ ಮಾಡಿದ್ದರು. ಇದಕ್ಕಾಗಿ ಮುಂಗಡ ಹಣವನ್ನು ಪಾವತಿಸಿದ್ದರು. ಆ.2ರ ಒಳಗೆ ಮೊೈಲ್ ತಲುಪಿಸುವುದಾಗಿ ಅಮೆಝಾನ್ ಕಂಪೆನಿ ತಿಳಿಸಿದ್ದು, ಸಮಯಕ್ಕೆ ಸರಿಯಾಗಿ ಮೊಬೈಲ್ ತಲುಪಿಸಿರಲಿಲ್ಲ.

ಇದಾದ ನಂತರ ಹಣ ಮರಳಿಸುವುದಕ್ಕೂ ಕಂಪೆನಿ ನಿರಾಕರಿಸಿದ್ದು, ಈ ಬಗ್ಗೆ ಕಂಪೆನಿ ಸಹಾಯವಾಣಿಗೆ ಕರೆ ಮಾಡಿದರೆ ಹಾರಿಕೆ ಉತ್ತರಗಳು ನೀಡಿ, ಮುಂಗಡವಾಗಿ ನೀಡಿದ ಹಣ ನೀಡುವುದಕ್ಕೂ ನಿರಾಕರಿಸಿದ್ದರು. ಇದರಿಂದ ಬೇಸತ್ತ ಅವರು, ಗ್ರಾಹಕ ವೇದಿಕೆಗೆ ದೂರು ಸಲ್ಲಿಸಿದ್ದರು. ದೂರನ್ನು ದಾಖಲಿಸಿಕೊಂಡು ಎರಡು ಕಡೆಯ ವಾದವನ್ನು ಆಲಿಸಿದ ಗ್ರಾಹಕ ನ್ಯಾಯಾಲಯ ಅಮೆಝಾನ್ ಕಂಪೆನಿಗೆ ದಂಡ ವಿಧಿಸಿದೆ. ತಿಂಗಳ ಒಳಗೆ ಪರಿಹಾರ ಮೊತ್ತವನ್ನು ದೂರುದಾರರಿಗೆ ನೀಡುವಂತೆ ನ್ಯಾಯಾಲಯ ಆದೇಶಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News