×
Ad

ಎಸ್‌ಡಿಎ ನೌಕರನ ಮನೆ ಮೇಲೆ ಎಸಿಬಿ ದಾಳಿ

Update: 2017-04-06 22:55 IST

ದಾವಣಗೆರೆ, ಎ.6: ವಾಣಿಜ್ಯ ತೆರಿಗೆ ಇಲಾಖೆಯ (ಎಸ್‌ಡಿಎ) ದ್ವಿತೀಯ ದರ್ಜೆ ಸಹಾಯಕನೊಬ್ಬನ ಐಷಾರಾಮಿ ಮನೆ ಮೇಲೆ ದಾಳಿ ನಡೆಸಿದ ಎಸಿಬಿ ತಂಡ ಅಪಾರ ಪ್ರಮಾಣದ ಆಸ್ತಿ ಪತ್ತೆ ಮಾಡಿದೆ.


ನಗರದ ವಾಣಿಜ್ಯ ತೆರಿಗೆ ಇಲಾಖೆಯ ದ್ವಿತೀಯ ದರ್ಜೆ ಸಹಾಯಕ ಎಸ್. ಕರಿಬಸಪ್ಪ ಅವರಿಗೆ ಸೇರಿದ ಸರಸ್ವತಿ ಬಡಾವಣೆಯ ಮನೆ ‘ನಿಸರ್ಗ’ದ ಮೇಲೆ ಗುರುವಾರ ಬೆಳಗ್ಗೆ ಎಸಿಬಿ ಪೊಲೀಸ್ ಉಪಾಧೀಕ್ಷಕ ಕವಳಪ್ಪ, ಇನ್‌ಸ್ಪೆಕ್ಟರ್ ಪ್ರಕಾಶಗೌಡ ಪಾಟೀಲ್ ನೇತೃತ್ವದಲ್ಲಿ ದಾಳಿ ನೆಸಲಾಯಿತು.


ಈ ಸಂದಭರ್ ಅಪಾರ ಪ್ರಮಾಣದ ಚಿನ್ನ-ಬೆಳ್ಳಿ ಆಭರಣ, ಕೋಟ್ಯಂತರ ರೂ. ವೌಲ್ಯದ ಮನೆ, ನಿವೇಶನ, ಹೊಲದ ದಾಖಲೆ, ವಾಹನ ಪತ್ತೆಯಾಗಿದೆ.
ಎಸ್‌ಡಿಎ ಕರಿಬಸಪ್ಪನ ನಿವಾಸದ ಮೇಲೆ ದಾಳಿ ನಡೆಸಿದ ವೇಳೆ ಎಸಿಬಿ ತಂಡವು 250 ಗ್ರಾಂ., ಚಿನ್ನಾಭರಣ, 500 ಗ್ರಾಂ., ಬೆಳ್ಳಿ ವಸ್ತು ಸೇರಿದಂತೆ 9 ಮನೆಗಳು, ಶ್ರೀ ದುರ್ಗಾಂಬಿಕಾ ಶಾಲೆ ಸಮೀಪದ ವಾಣಿಜ್ಯ ಮಳಿಗೆ, 6 ನಿವೇಶನ, ರಾಮಗೊಂಡನಹಳ್ಳಿ ಬಳಿ 8 ಎಕರೆ ಜಮೀನು ದಾಖಲೆಗಳು, ಐಷಾರಾಮಿ ಐ20 ಕಾರು, 3 ದ್ವಿಚಕ್ರ ವಾಹನಗಳನ್ನು ಪತ್ತೆ ಹಚ್ಚಿದೆ ಎಂದು ಗೊತ್ತಾಗಿದೆೆ. ನಿವೇಶನ, ಮನೆ, ಹೊಲ, ಕಾಂಪ್ಲೆಕ್ಸ್‌ನ ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿತ್ತು. ಗುರುವಾರ ಸಂಜೆಯವರೆಗೂ ಎಸಿಬಿ ತಂಡದಿಂದ ಪರಿಶೀಲನಾ ಕಾರ್ಯ ಸಾಗಿತ್ತು ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News