18 ಲಕ್ಷ ರೂ. ಮೌಲ್ಯದ ನಿಷೇಧಿತ ನೋಟುಗಳ ಸಾಗಾಟ: ಓರ್ವನ ಬಂಧನ

Update: 2017-04-08 18:45 GMT

ಭಟ್ಕಳ, ಎ.8: 18 ಲಕ್ಷ ರೂ. ಮೌಲ್ಯದ ನಿಷೇಧಿತ 500, 1,000 ರೂ. ಮುಖಬೆಲೆಯ ನೋಟುಗಳನ್ನು ಸಾಗಿಸುತ್ತಿದ್ದ ವ್ಯಕ್ತಿಯೋರ್ವನನ್ನು ರೈಲ್ವೆ ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿರುವ ವಿಷಯ ತಡವಾಗಿ ಬೆಳಕಿಗೆ ಬಂದಿದೆ.

ಕಾಸರಗೋಡು ಮೂಲದ ಅಬ್ದುಲ್ ಮುಹಿದ್ದೀನ್ ನಿಷೇಧಕ್ಕೊಳಗಾದ ನೋಟುಗಳನ್ನು ಸಾಗಿಸುತ್ತಿದ್ದ ಎನ್ನಲಾಗಿದೆ.

ಮಡಗಾಂವ್ ನಿದ ಮಂಗಳೂರು ಮಾರ್ಗವಾಗಿ ಕೇರಳಕ್ಕೆ ಹೋಗುವ ನೇತ್ರಾವತಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ಪೊಲೀಸರು ತಪಾಸಣೆ ನಡೆಸಿದ್ದು, ಈ ಸಂದರ್ಭ 1,000 ಮುಖಬೆಲೆಯ 13 ಲಕ್ಷ ಹಾಗೂ 500 ಮುಖಬೆಲೆಯ 5 ಲಕ್ಷ ಮೌಲ್ಯದ ನೋಟುಗಳು ಪತ್ತೆಯಾಗಿವೆ.

ಆರೋಪಿಯನ್ನು ವಶಕ್ಕೆ ಪಡೆದುಕೊಂಡ ರೈಲ್ವೆ ಪೊಲೀಸರು ಭಟ್ಕಳ ನಗರಠಾಣೆಗೆ ಒಪ್ಪಿಸಿದ್ದು, ಅಪರಾಧ ವಿಭಾಗದ ಪಿ.ಎಸ್.ಐ. ಪರಮೇಶ್ವರಪ್ಪ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಮುಂದುವರೆಸಿದ್ದಾರೆ.

ಕಾರ್ಯಚರಣೆಯಲ್ಲಿ ಕಾರವಾರ ಜಿಲ್ಲಾ ರೈಲ್ವೆ ಪೊಲೀಸ್ ಸಹಾಯಕ ಕಮಿಷನರ್ ಪ್ರವೀಣ ಕುಮಾರ್, ವಿನೋದ ಕುಮಾರ್, ಕಾರವಾರ ರೈಲ್ವೆ ಪಿ.ಎಸ್.ಐ ರಾಜೇಶ ಕುಮಾರ್ ದುಬೆ, ಸಬ್ ಇನ್ಸಪೆಕ್ಟರ್ ಕಾರವಾರ ಸಿಬ್ಬಂದಿ ಅಜೇಶ ವಿ.ಕೆ. ಮಾರುತಿ ಮಾದರ್ ಮತ್ತಿತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News