ಉಪಚುನಾವಣೆ :ಬೆಳಗ್ಗೆ 11 ಗಂಟೆ ವೇಳೆಗೆ ನಂಜನಗೂಡು ಶೇ 26.11ರಷ್ಟು , ಗುಂಡ್ಲುಪೇಟೆಯಲ್ಲಿ ಶೇ 23.09ರಷ್ಟು ಮತದಾನ

Update: 2017-04-09 06:14 GMT

ಬೆಂಗಳೂರು, ಎ.9: ಆಡಳಿತಾರೂಢ ಕಾಂಗ್ರೆಸ್ ಮತ್ತು ವಿಪಕ್ಷ ಬಿಜೆಪಿಯ ಶಕ್ತಿ ಪರೀಕ್ಷೆಯ ಕಣವಾಗಿ ಪರಿಣಮಿಸಿರುವ ನಂಜನಗೂಡು ಮತ್ತು  ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರಗಳಿಗೆ  ಉಪ ಚುನಾವಣೆಗೆ ಮತದಾನ ರವಿವಾರ  ಬೆಳಗ್ಗೆ  ಆರಂಭಗೊಂಡಿದೆ.
ಗುಂಡ್ಲುಪೇಟೆಯಲ್ಲಿ  ಬೆಳಗ್ಗೆ 9:00 ಗಂಟೆಯ ಹೊತ್ತಿಗೆ ಶೇ15.20ರಷ್ಟು ಮತದಾನ ನಡೆದ ಬಗ್ಗೆ ವರದಿಯಾಗಿದೆ. 
ಗುಂಡ್ಲುಪೇಟೆಯಲ್ಲಿ ಮಾಜಿ ಸಚಿವ ಹೆಚ್.ಎಸ್. ಮಹದೇವಪ್ರಸಾದ್ ಅವರ ಅಕಾಲಿಕ ನಿಧನದಿಂದಾಗಿ ತೆರವಾಗಿರುವ ಸ್ಥಾನಕ್ಕೆ  ಮತ್ತು ನಂಜನಗೂಡಿನಲ್ಲಿ ಮಾಜಿ ಸಚಿವ ಶ್ರೀನಿವಾಸ ಪ್ರಸಾದ್ ಅವರು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿ, ಬಿಜೆಪಿ ಸೇರಿದ್ದರಿಂದ  ಉಪಚುನಾವಣೆ ನಡೆಯುತ್ತಿದೆ. 
ಉಭಯ ಕ್ಷೇತ್ರಗಳಲ್ಲೂ ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ನೇರ ಸ್ಪರ್ಧೆನಡೆಯಲಿದೆ.
ನಂಜನಗೂಡು ಕ್ಷೇತ್ರದಲ್ಲಿ ಒಟ್ಟು 11 ಅಭ್ಯರ್ಥಿಗಳಿದ್ದಾರೆ.  ಬಿಜೆಪಿ ವಿ.ಶ್ರೀನಿವಾಸಪ್ರಸಾದ್‌  ಹಾಗೂ ಕಾಂಗ್ರೆಸ್‌ನ ಕಳಲೆ ಕೇಶವಮೂರ್ತಿ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ.
ಗುಂಡ್ಲುಪೇಟೆ ಉಪ ಚುನಾವಣೆಯ ಕಣದಲ್ಲಿ ಒಟ್ಟು 7 ಅಭ್ಯರ್ಥಿಗಳು ಕಣದಲ್ಲಿದ್ದಾರೆ, ಕಾಂಗ್ರೆಸ್ ನ  ಡಾ.ಗೀತಾ ಮಹದೇವಪ್ರಸಾದ್ ಹಾಗೂ ಬಿಜೆಪಿಯ ಸಿ.ಎಸ್. ನಿರಂಜನ್ ಕುಮಾರ್  ಅದೃಷ್ಠ ಪರೀಕ್ಷೆಗೆ ಇಳಿದಿದ್ದಾರೆ.
ಹೈಲೈಟ್ಸ್

*ನಂಜನಗೂಡಿನಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಮತದಾರರಿಗೆ ಹಣ ಹಂಚುತ್ತಿದ್ದಾರೆಂಬ  ಆರೋಪ ಕೇಳಿ ಬಂದಿದೆ. 

*ಗುಂಡ್ಲುಪೇಟೆಯಲ್ಲಿ  ಬೆಳಗ್ಗೆ 9:00 ಗಂಟೆಯ ಹೊತ್ತಿಗೆ ಶೇ15.20ರಷ್ಟು ಮತದಾನ 

*ನಂಜನಗೂಡಿನಲ್ಲಿ ಬೆಳಗ್ಗೆ 9:00 ಗಂಟೆಯ ಹೊತ್ತಿಗೆ ಶೇ 6.5ರಷ್ಟು ಮತದಾನ 

*ಗುಂಡ್ಲುಪೇಟೆಯ ಮಹದೇವ ನಗರದಲ್ಲಿ ಮೂಲಭೂತ ಸೌಕರ್ಯ ವನ್ನು ಕಲ್ಪಿಸದ ಕಾರಣಕ್ಕಾಗಿ ಮತದಾನವನ್ನು ಮತದಾರರು ಬಹಿಷ್ಕರಿಸಿದ್ದಾರೆ. 700 ಮತದಾರರಲ್ಲಿ 12 ಮಂದಿ ಮತ ಚಲಾಯಿಸಿದ್ದಾರೆ.

*ಗುಂಡ್ಲು ಪೇಟೆಯ ಬೇಗೂರಿನ ಮತಗಟ್ಟಯ ಬಳಿ ಬಿಜೆಪಿ -ಕಾಂಗ್ರೆಸ್ ಕಾರ್ಯಕರ್ತರ ನಡುವೆ ವಾಗ್ವಾದ.

*ನಂಜನಗೂಡು  ಕ್ಷೇತ್ರದಲ್ಲಿ ಬೆಳಗ್ಗೆ 11 ಗಂಟೆ ವೇಳೆಗೆ ಶೇ 26.11ರಷ್ಟು ಮತದಾನ  

*  ಗುಂಡ್ಲುಪೇಟೆಯಲ್ಲಿ ಬೆಳಗ್ಗೆ 11 ಗಂಟೆ ವೇಳೆಗೆ ಶೇ 23.09ರಷ್ಟು ಮತದಾನ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News