ನರಸೀಪುರ ಗ್ರಾಮದಲ್ಲಿ 20 ಕುರಿ ಕಳ್ಳತನ: ಅಧಿಕಾರಿಗಳ ಮೌನದ ವಿರುದ್ಧ ಗ್ರಾಮಸ್ಥರ ಆಕ್ರೋಶ
Update: 2017-04-10 16:56 IST
ಚಿಕ್ಕಮಗಳೂರು, ಎ.10: ಬೆಳವಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ನರಸೀಪುರ ಗ್ರಾಮದ ದೊಡ್ಡಿಯಲ್ಲಿದ್ದ 20 ಕುರಿಗಳು ಕಳ್ಳತನವಾಗಿರುವ ಕುರಿತು ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ನರಸೀಪುರ ಗ್ರಾಮದ ರಾಜೇಗೌಡ ಎಂಬವರಿಗೆ ಸೇರಿದ ದೊಡ್ಡಿಗೆ ನುಗ್ಗಿದ ಕಳ್ಳರು ರಾತ್ರೋರಾತ್ರಿ ಸುಮಾರು 20 ಕುರಿಗಳನ್ನು ಕದ್ದೊಯ್ದಿದ್ದಾರೆ. ಈ ಕುರಿತು ಮರುದಿನ ಬೆಳಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ. ದೂರು ನೀಡಿದ ನಂತರ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸರು ಸ್ಥಳ ಪರಿಶೀಲಿಸಿದ್ದರಾದರೂ ಒಂದು ವಾರ ಕಳೆದರೂ ಈ ತನಕ ಕಳ್ಳತನ ಆರೋಪಿಗಳ ಪತ್ತೆಯಾಗಿಲ್ಲ.
ಕುರಿ ಕಳೆದುಕೊಂಡ ರಾಜೇಗೌಡರಿಗೆ ಸುಮಾರು 1.5 ಲಕ್ಷದಷ್ಟು ನಷ್ಟವಾಗಿದೆ. ಆದರೆ ಇದುವರೆಗೂ ಕೂಡ ಯಾವುದೇ ಸ್ಥಳೀಯ ಆಡಳಿತ ಅಧಿಕಾರಿಗಳಾಗಲಿ, ಮುಖಂಡರಾಗಲಿ ಅತ್ತ ಗಮನ ಹರಿಸಿಲ್ಲ. ಇನ್ನಾದರೂ ಜಿಲ್ಲಾಡಳಿತ ಅಥವಾ ಸ್ಥಳೀಯ ಆಡಳಿತ ರಾಜೇಗೌಡರ ನೆರವಿಗೆ ಬರಬೇಕಾಗಿ ನರಸೀಪುರ ಗ್ರಾಮಸ್ಥರು ಮನವಿ ಮಾಡಿದ್ದಾರೆ.