×
Ad

ವಿದ್ಯುತ್ ಅವಘಡ: ಮೆಸ್ಕಾಂ ನೌಕರ ಮೃತ್ಯು

Update: 2017-04-10 18:51 IST

ಕಳಸ, ಎ.10: ವಿದ್ಯುತ್ ಅವಘಡದಿಂದ ಮೆಸ್ಕಾಂ ನೌಕರರೊಬ್ಬರು ಸಾವಿಗೀಡಾದ ಘಟನೆ ಕಳಸ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರವಿವಾರ ರಾತ್ರಿ ಸಂಭವಿಸಿದೆ.

ಚಿಕ್ಕಮಗಳೂರು ನಿವಾಸಿ ರೇವಣ್ಣ ಶೆಟ್ಟಿ (45) ಎಂಬವರು ಮೃತಪಟ್ಟ ವ್ಯಕ್ತಿ. ಕಳಸ ಮೆಸ್ಕಾಂನಲ್ಲಿ 15 ವರ್ಷಗಳಿಂದ ನೌಕರರಾಗಿ ಕೆಲಸ ಮಾಡುತ್ತಿದ್ದ ರೇವಣ್ಣ ನಿನ್ನೆ ರಾತ್ರಿ ಸುಮಾರು 7 ಗಂಟೆಯ ಸುಮಾರಿಗೆ ಕಾರಗದ್ದೆಯ ಸೈಲೆಂಟ್ ವ್ಯಾಲಿ ಎಂಬಲ್ಲಿ ವಿದ್ಯುತ್ ಸಮಸ್ಯೆಯ ದೂರು ಬಂದಾಗ ಅದನ್ನು ಸರಿಪಡಿಸಲು ತೆರಳಿದ್ದರು. ಈ ಸಂದರ್ಭ ಡೋಲೋ ಫ್ಯೂಸ್ ಹೋಗಿರುವುದು ಗಮನಕ್ಕೆ ಬಂದಿದೆ. ಫ್ಯೂಸ್ ಹಾಕಲು ಮುಂದಾದಾಗ ವಿಪರೀತ ಮಳೆ ಬಂದಿರುವ ಪರಿಣಾಮ ವಿದ್ಯುತ್ ಕಂಬದಲ್ಲಿ ವಿದ್ಯುತ್ ಹರಿದು ಗ್ರೌಂಡ್ ಆಗಿ ವಿದ್ಯುತ್ ಆಘಾತಕ್ಕೊಳಗಾಗಿ  ರೇವಣ್ಣ ಶೆಟ್ಟಿ ಬಿದ್ದಿದ್ದಾರೆ. ಈ ಸಂದರ್ಭ ಅವರನ್ನು ಕಳಸ ಸರಕಾರಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅಷ್ಟರಲ್ಲಾಗಲೇ ಅವರು ಮೃತಪಟ್ಟಿದ್ದರು.

ವಿಷಯ ತಿಳಿದ ಮೆಸ್ಕಾಂ ಇಲಾಖೆಯ ಅಧಿಕಾರಿಗಳು ಹಾಗೂ ಕಳಸ ಪೋಲಿಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News