×
Ad

ನಾಯಿಗಳ ದಾಳಿಗೊಳಗಾಗಿ ಜಿಂಕೆ ಸಾವು

Update: 2017-04-10 18:57 IST

ಚಿಕ್ಕಮಗಳೂರು, ಎ.10: ಕುಡಿಯುವ ನೀರು ಅರಸಿಕೊಂಡು ಕಾಡಿನಿಂದ ನಾಡಿಗೆ ಬಂದಿದ್ದ ವೇಳೆ ನಾಯಿಗಳು ದಾಳಿ ಮಾಡಿದ ಪರಿಣಾಮ ಒಂದು ವರ್ಷದ ಜಿಂಕೆ ಸಾವನ್ನಪ್ಪಿರುವ ಘಟನೆ ನಡೆದಿದೆ. 

ನೀರನ್ನು ಅರಸಿಕೊಂಡು ಎನ್.ಆರ್.ಪುರದ ಇಂಡಸ್ಟ್ರಿಯಲ್ ಏರಿಯಾಕ್ಕೆ ಜಿಂಕೆ ಬಂದಿತ್ತು. ಈ ಸಂದರ್ಭ ಅಲ್ಲಿದ್ದ ನಾಯಿಗಳು ದಾಳಿ ನಡೆಸಿವೆ. ಘಟನೆ ನಡೆದ ತಕ್ಷಣ ಪಶು ಇಲಾಖೆಯ ಅಧಿಕಾರಿಗಳು ಜಿಂಕೆಗೆ ಚಿಕಿತ್ಸೆ ನೀಡಿದರೂ ಸಾವನ್ನಪ್ಪಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News