×
Ad

ಐಪಿಎಲ್ ಬೆಟ್ಟಿಂಗ್: ನಾಲ್ವರ ಬಂಧನ

Update: 2017-04-10 23:21 IST

ಗದಗ, ಎ.10: ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ನಡೆಸುತ್ತಿದ್ದ ನಾಲ್ವರನ್ನು ಪೊಲೀಸರು ಬಂಧಿಸಿರುವ ಘಟನೆ ಗದಗ ಜಿಲ್ಲೆ ರೋಣ ತಾಲೂಕಿನ ಗಜೇಂಡ್ರಗಡ ಪಟ್ಟಣದಲ್ಲಿ ನಡೆದಿದೆ. 

ನಗರದ ದುರ್ಗಾ ಪ್ರಸಾದ್ ಲಾಡ್ಜ್ ಹಾಗೂ ಕುಷ್ಟಗಿ ರಸ್ತೆ ಡಾಬ ಬಳಿ ಪ್ರತ್ಯೇಕವಾಗಿ ದಾಳಿ ನಡೆಸಿದ ಪೊಲೀಸರು ಬೆಟ್ಟಿಂಗ್ ನಲ್ಲಿ ನಿರತರಾಗಿದ್ದ ಅರವಿಂದ, ಗೋಪಿಕೃಷ್ಣ, ಲೋಕನಾಥ್ ಹಾಗೂ ವಿನಾಯಕ ಎಂಬುವರನ್ನು ಬಂಧಿಸಿದ್ದಾರೆ. 

ಬಂಧಿತರಿಂದ ಒಂದು ಟಿವಿ, ಎಂಟು ಸಾವಿರ ರೂ. ಹಾಗೂ ಮೊಬೈಲ್ ವಶಪಡಿಸಿಕೊಳ್ಳಲಾಗಿದೆ. ರೋಣ ಸಿಪಿಐ ಬಿಳಗಿ ಹಾಗೂ ಗಜೇಂದ್ರಗಡ ಪಿಎಸ್ಐ ಎಚ್. ಎಸ್ ನಡಗಡ್ಡಿ ನೇತೃತ್ವದಲ್ಲಿ ದಾಳಿ ನಡೆಸಲಾಗಿದ್ದು, ಘಟನೆ ಕುರಿತು ಗದಗ ಜಿಲ್ಲೆ ಗಜೇಂದ್ರಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News