×
Ad

ರಾಜ್ಯದಲ್ಲಿ ವಿದ್ಯುತ್ ದರ ಹೆಚ್ಚಳ

Update: 2017-04-11 12:49 IST

ಬೆಂಗಳೂರು, ಎ.11: ರಾಜ್ಯದ ಐದು ವಿದ್ಯುತ್ ಕಂಪೆನಿಗಳು ವಿದ್ಯುತ್ ದರ ಏರಿಕೆ ಮಾಡುವಂತೆ ಸಲ್ಲಿಸಿದ್ದ ಪ್ರಸ್ತಾವಕ್ಕೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗವು ಒಪ್ಪಿಗೆ ನೀಡಿ (ಕೆಇಆರ್‌ಸಿ) ವಿದ್ಯುತ್ ದರ ಏರಿಸಿ ರಾಜ್ಯದ ಜನರಿಗೆ ವಿದ್ಯುತ್ ಶಾಕ್ ನೀಡಿದೆ.

ವಿದ್ಯುತ್ ಕಂಪನಿಗಳು ಎದುರಿಸುತ್ತಿರುವ ನಷ್ಠದಿಂದ ಹೊರಬರಲು ವಿದ್ಯುತ್ ದರ ಏರಿಕೆ ಮಾಡುವಂತೆ ರಾಜ್ಯದ ಬೆಸ್ಕಾ, ಹೆಸ್ಕಾಂ, ಚೆಸ್ಕಾಂ, ಮೆಸ್ಕಾಂ ಮತ್ತು ಜೆಸ್ಕಾಂ ಕಂಪೆನಿಗಳು ಪ್ರತಿ ಯೂನಿಟ್‌ಗೆ 1.48 ರೂ. ಹೆಚ್ಚಳ ಮಾಡುವಂತೆ ಮಾಡುವಂತೆ ಸಲ್ಲಿಸಿದ್ದ ಮನವಿಗೆ ಕೆಇಆರ್‌ಸಿ ಪ್ರತಿ ಯೂನಿಟ್‌ಗೆ 20 ಪೈಸೆ ಹೆಚ್ಚಿಸುವ ಮೂಲಕ ವಿದ್ಯುತ್ ಬರೆ ಎಳೆದಿದೆ.

* ಪ್ರತಿ ಯೂನಿಟ್ 20 ಪೈಸೆ ದರ ಏರಿಕೆ
* ರಾಜ್ಯದ ಜನರಿಗೆ ವಿದ್ಯುತ್ ಬರೆ
*2012-13ರಲ್ಲಿ 73 ಪೈಸೆ ಪ್ರಸ್ತಾವಕ್ಕೆ 13 ಪೈಸೆ ಹೆಚ್ಚಳ 
*2013-14-ರಲ್ಲಿ 70 ಪೈಸೆ ಪ್ರಸ್ತಾವಕ್ಕೆ 13 ಪೈಸೆ ಹೆಚ್ಚಳ
* 2014-15ರಲ್ಲಿ 66 ಪೈಸೆ ಮನವಿಗೆ 32 ಪೈಸೆ ಏರಿಕೆ
* 2015 -16ರಲ್ಲಿ 80 ಪೈಸೆಗೆ 13 ಪೈಸೆ ಹೆಚ್ಚಳ

ಗೃಹಬಳಕೆ ಮತ್ತು ವಾಣಿಜ್ಯ ಬಳಕೆಯ ವಿದುತ್ ದರವನ್ನು ಕೆಇಆರ್‌ಸಿ ಹೆಚ್ಚಿಸುವ ಮೂಲಕ ರಾಜ್ಯದಲ್ಲಿ ಸತತ ಬರಗಾಲದಿಂದ ರೈತರು ತತ್ತರಿಸಿರುವ ಬೆನ್ನಲ್ಲೇ ವಿದ್ಯುತ್ ಶಾಕ್‌ನಿಂದ ಜನರು ಬಸವಳಿಯುವಂತಾಗಿದೆ.
ವಿದ್ಯುತ್ ಕಂಪೆನಿಗಳು ಪ್ರತಿ ಯೂನಿಟ್ ವಿದ್ಯುತ್‌ಗೆ 5.8 ರೂ. ನೀಡಿ ಖರೀದಿ ಮಾಡಿ ಗ್ರಾಹಕರಿಗೆ ಕಡಿಮೆ ದರದಲ್ಲಿ ವಿದ್ಯುತ್ ಸರಬರಾಜು ಮಾಡುತ್ತಿವೆ. ಹೀಗಾಗಿ ವಿದ್ಯುತ್ ಕಂಪೆನಿಗಳು ನಷ್ಟ ಅನುಭವಿಸುತ್ತಿದ್ದು, ಅದನ್ನು ಸರಿದೂಗಿಸಲು 1.48 ರೂ. ಪ್ರತಿ ಯೂನಿಟ್‌ಗೆ ಹೆಚ್ಚಳ ಮಾಡುವಂತೆ ಕೆಇಆರ್‌ಸಿಗೆ ಪ್ರಸ್ತಾವ ಸಲ್ಲಿಸಿದ್ದವು.

ದರ ಏರಿಕೆಗೆ ಸಲ್ಲಿಸಿದ್ದ ಪ್ರಸ್ತಾವಕ್ಕೆ ಸಾರ್ವಜನಿಕರು, ಸಂಘ ಸಂಸ್ಥೆಗಳು, ರೈತರ ಅಹವಾಲು ಸ್ವೀಕರಿಸಿ ಅಂತಿಮವಾಗಿ ಕೆಇಆರ್‌ಸಿ ಪ್ರತಿ ಯೂನಿಟ್‌ಗೆ 20 ಪೈಸೆ ಹೆಚ್ಚಳ ಮಾಡಲು ಸಮ್ಮತಿಸಿದೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.

2012ರಲ್ಲಿ 73 ಪೈಸೆ ಹೆಚ್ಚಳ ಮಾಡುವಂತೆ ವಿದ್ಯುತ್ ಕಂಪೆನಿಗಳು ಮನವಿ ಮಾಡಿದ್ದವು. ಆಗ 13 ಪೈಸೆ ಹೆಚ್ಚಳ ಮಾಡಲಾಗಿತ್ತು. 2013-14ರಲ್ಲಿ 70 ಪೈಸೆ ಹೆಚ್ಚಳ ಮಾಡುವವಂತೆ ಸಲ್ಲಿಸಿದ್ದ ಪ್ರಸ್ತಾವನೆಗೆ 13 ಪೈಸೆ ಹೆಚ್ಚಿಸಲಾಗಿತ್ತು. 2014-15ರಲ್ಲಿ 66 ಪೈಸೆ ಹೆಚ್ಚಿಸುವಂತೆ ಮಾಡಿದ್ದ ಮನವಿಗೆ 32 ಪೈಸೆ ಹೆಚ್ಚಿಸಿ ಆದೇಶಿಸಲಾಗಿತ್ತು. 2015 -16ರಲ್ಲಿ 80 ಪೈಸೆ ಹೆಚ್ಚಳ ಮಾಡುವಂತೆ ಮಾಡಿದ್ದ ಮನವಿಗೆ 13 ಪೈಸೆ ಹೆಚ್ಚಳ ಮಾಡಲಾಗಿತ್ತು. 2017-18ರಲ್ಲಿ 1.48 ರೂ. ಹೆಚ್ಚಳ ಮಾಡುವಂತೆ ಮಾಡಿದ್ದ ಮನವಿಗೆ 20 ಪೈಸೆ ಹೆಚ್ಚಳ ಮಾಡಲಾಗಿದೆ.

ರಾಜ್ಯದ ಎಲ್ಲ ಎಸ್ಕಾಂ ವ್ಯಾಪ್ತಿಯಲ್ಲಿ ಪ್ರತಿ ಯೂನಿಟ್‌ಗೆ 48 ಪೈಸೆ ಹೆಚ್ಚಳ ಮಾಡಲು ನಿರ್ಧರಿಸಲಾಗಿದೆ. ಏ.1 ರಿಂದಲೇ ದರ ಹೆಚ್ಚಳ ಪೂರ್ವಾನ್ವಯವಾಗಲಿದೆ ಎಂದು ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಮಂಡಳಿ(ಕೆಇಆರ್‌ಸಿ) ಅಧ್ಯಕ್ಷ ಶಂಕರಲಿಂಗೇಗೌಡ ತಿಳಿಸಿದ್ದಾರೆ.

ವಿದ್ಯುತ್ ಸರಬರಾಜು ಕಂಪೆನಿ(ಎಸ್ಕಾಂ)ಗಳು ಪ್ರತಿ ಯೂನಿಟ್‌ಗೆ ಸರಾಸರಿ 1.48 ರೂ. ಏರಿಕೆಗೆ ಪ್ರಸ್ತಾವನೆ ಸಲ್ಲಿಸಿದ್ದವು. ಪ್ರಸ್ತಾವನೆ ವಿರೋಧಿಸಿ ಗ್ರಾಹಕರು ಕೆಆರ್‌ಇಸಿಗೆ ಆಕ್ಷೇಪಣೆಗಳನ್ನು ಸಲ್ಲಿಸಿದ್ದರು. ಇದಕ್ಕೆ ಸಂಬಂಧಿಸಿದ ಗ್ರಾಹಕರು ಹಾಗೂ ಎಸ್ಕಾಂಗಳ ವಿಚಾರಣೆಯನ್ನು ಪೂರ್ಣಗೊಳಿಸಿದ ಆಯೋಗ ತನ್ನ ತೀರ್ಪನ್ನು ಕಾಯ್ದಿರಿಸಿತ್ತು. ಮಂಗಳವಾರ ವಿದ್ಯುತ್ ದರ ಪರಿಷ್ಕರಣೆ ಮಾಡಿ ಆದೇಶ ಹೊರಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News