ದ್ವಿಚಕ್ರ ವಾಹನ ಪರಸ್ಪರ ಢಿಕ್ಕಿ: ಮಹಿಳೆ ಸೇರಿದಂತೆ ಇಬ್ಬರು ಮೃತ್ಯು
Update: 2017-04-11 16:35 IST
ತುಮಕೂರು, ಎ.11: ಎರಡು ದ್ವಿಚಕ್ರ ವಾಹನಗಳು ಪರಸ್ಪರ ಢಿಕ್ಕಿಯಾದ ಪರಿಣಾಮ ಮಹಿಳೆ ಸೇರಿದಂತೆ ಇಬ್ಬರು ಮೃತಪಟ್ಟ ಘಟನೆ ತುಮಕೂರು ಜಿಲ್ಲೆ ಶಿರಾ ನಗರದಲ್ಲಿ ನಡೆದಿದೆ.
ಬೆಂಗಳೂರಿನಿಂದ ಅಮರಾಪುರಕ್ಕೆ ಹೋಗುತ್ತಿರುವಾಗ ಶಿರಾ ನಗರದ ಆರ್. ರೆಹನ್ ಶಾಲೆ ಮುಂಭಾಗ ದ್ವಿಚಕ್ರ ವಾಹನಗಳು ಢಿಕ್ಕಿಯಾಗಿದೆ. ಪರಿಣಾಮ ತಾಸಿನ್ (35) ಎಂಬವರು ಸ್ಥಳದಲ್ಲೇ ಸಾವನ್ನಪ್ಪಿದರೆ, ಮತ್ತೋರ್ವ ಪ್ರಯಾಣಿಕ ತುಮಕೂರು ಜಿಲ್ಲಾಸ್ಪತ್ರೆಗೆ ಸಾಗಿಸುವ ವೇಳೆ ಕೊನೆಯುಸಿರೆಳೆದಿದ್ದಾರೆ. ಈ ಬಗ್ಗೆ ಶಿರಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.