×
Ad

​ಪ್ಲಾಸ್ಟಿಕ್ ಗೋದಾಮಿಗೆ ಬೆಂಕಿ: ಒಂದೂವರೆ ಕೋಟಿ ರೂ.ಗೂ ಅಧಿಕ ನಷ್ಟ

Update: 2017-04-11 17:23 IST

ಶಿವಮೊಗ್ಗ, ಎ.11: ಪ್ಲಾಸ್ಟಿಕ್ ಗೋದಾಮಿಗೆ ಬೆಂಕಿ ಬಿದ್ದ ಪರಿಣಾಮ ಪ್ಲಾಸ್ಟಿಕ್ ವಸ್ತು ಹಾಗೂ ಯಂತ್ರೋಪಕರಣಗಳು ಸುಟ್ಟು ಭಸ್ಮವಾಗಿ ಸುಮಾರು ಒಂದೂವರೆ ಕೋಟಿ ರೂ.ಗಳಷ್ಟು ನಷ್ಟ ಸಂಭವಿಸಿದ ಘಟನೆ ನಗರದ ಎನ್.ಟಿ.ರಸ್ತೆಯ ಭಾರತ್ ಪೌಂಡ್ರಿ ಫ್ಯಾಕ್ಟರಿ ಹಿಂಭಾಗದ ಮಾರ್ನಾಮಿಬೈಲು ಬಡಾವಣೆಯಲ್ಲಿ ನಡೆದಿದೆ.

ತಡರಾತ್ರಿ ಸುಮಾರು 1 ಗಂಟೆಯ ನಂತರ ಈ ಘಟನೆ ನಡೆದಿದ್ದು, ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸುವಲ್ಲಿ ಸಫಲರಾಗಿದ್ದಾರೆ. ಈ ಸಂಬಂಧ ಘಟಕದ ಮಾಲಕರು ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಶಾರ್ಟ್‌ಸರ್ಕ್ಯೂಟ್ ಅಥವಾ ಆಕಸ್ಮಿಕವಾಗಿ ಘಟಕಕ್ಕೆ ಬೆಂಕಿ ಬಿದ್ದಿಲ್ಲ ಎನ್ನಲಾಗುತ್ತಿದ್ದು, ಯಾರೋ ಕಿಡಿಗೇಡಿಗಳು ಈ ಕೃತ್ಯ ನಡೆಸಿದ್ದಾರೆ ಎನ್ನುವ ಶಂಕೆ ವ್ಯಕ್ತವಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. 

ಎಸ್ಪಿ ಅಭಿನವ್ ಖರೆ, ಡಿವೈಎಸ್ಪಿ ಮಂಜುನಾಥ್ ಶೆಟ್ಟಿ, ಮಹಾನಗರ ಪಾಲಿಕೆ ಮೇಯರ್ ಏಳುಮಲೈ ಬಾಬು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News