ಅನ್ನಭಾಗ್ಯ ಅಕ್ಕಿ ಅಕ್ರಮ ದಾಸ್ತಾನಿನ ಮೇಲೆ ದಾಳಿ ನಡೆಸಿದ್ದ ಅಧಿಕಾರಿಗಳ ಕೊಲೆಯತ್ನ: ಅಪರಾಧಿಗಳಿಗೆ 6 ತಿಂಗಳು ಜೈಲು

Update: 2017-04-11 13:37 GMT

ದಾವಣಗೆರೆ, ಎ.11: ಅನ್ನಭಾಗ್ಯ ಅಕ್ಕಿಯನ್ನು ಅಕ್ರಮವಾಗಿ ದಾಸ್ತಾನಿರಿಸಲಾಗಿದ್ದ ಗೋದಾಮಿನ ಮೇಲೆ ದಾಳಿ ನಡೆಸಿದ್ದ ಉಪ ವಿಭಾಗಾಧಿಕಾರಿ, ತಹಶೀಲ್ದಾರ್ ಹತ್ಯೆಗೆ ಯತ್ನಿಸಿದ್ದ ಮೂವರು ಆರೋಪಿಗಳಿಗೆ 6 ತಿಂಗಳ ಕಾಲ ಜೈಲು ಶಿಕ್ಷೆ ವಿಧಿಸಿ ಜಿಲ್ಲಾ ದಂಡಾಧಿಕಾರಿ, ಜಿಲ್ಲಾಧಿಕಾರಿ ಡಿ.ಎಂ. ರಮೇಶ್ ಆದೇಶ ಹೊರಡಿಸಿದ್ದಾರೆ

ತಾಲೂಕಿನ ಹಳೆಬಾತಿ ಗ್ರಾಮದ ಎಂ. ಉಮಾಪತಯ್ಯ, ಆತನ ಮಗ ಪ್ರಶಾಂತ ಹಾಗೂ ದಾವಣಗೆರೆ ಭಾರತ ಕಾಲನಿಯ ಕಿರಣ್ ನಾಯ್ಕ ಎಂಬವರೇ ಜೈಲುಶಿಕ್ಷೆಗೊಳಗಾದ ಆರೋಪಿಗಳು. 

ಎ.8ರಂದು ಮಧ್ಯಾಹ್ನ ದಾವಣಗೆರೆ ಉಪ ವಿಭಾಗಾಧಿಕಾರಿ ಕುಮಾರಸ್ವಾಮಿ, ತಹಶೀಲ್ದಾರ್ ಸಂತೋಷಕುಮಾರ ಹಾಗೂ ಇತರ ಅಧಿಕಾರಿ, ಸಿಬ್ಬಂದಿ ಬಾತಿ ಗ್ರಾಮದ ದರ್ಗಾ ಬಳಿಯ ಉಗ್ರಾಣದಲ್ಲಿ ಅನ್ನಭಾಗ್ಯದ ಅಕ್ಕಿ ದಾಸ್ತಾನು ಮಾಡಿಟ್ಟ ಬಗ್ಗೆ ದೊರೆತ ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದ್ದರು. ಈ ವೇಳೆ ಉಮಾಪತಯ್ಯ ಹಾಗೂ ಇತರರು ಅಧಿಕಾರಿಗಳ ಮೇಲೆ ಲಾರಿ ಹರಿಸಿ, ಹತ್ಯೆಗೆ ಪ್ರಯತ್ನಿಸಿದ್ದರು. ಆರೋಪಿ ಉಮಾಪತಯ್ಯ ಇತರರ ವಿರುದ್ಧ ಅಗತ್ಯ ವಸ್ತುಗಳ ಕಾಯ್ದೆ -1955ರ ಕಲಂ 3 ಮತ್ತು 7 ಮತ್ತು ಐಪಿ ಸಿ ಸೆಕ್ಷನ್‌ನಡಿ ವಿವಿಧ ಪ್ರಕರಣ ದಾಖಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News