×
Ad

ಎ.14 ರಂದು ಎ.ಪಿ ಉಸ್ತಾದ್ ಸಾಗರಕ್ಕೆ

Update: 2017-04-11 23:05 IST

ಸಾಗರ,ಎ.11 : ಬದ್ರಿಯ ಮಸೀದಿ ಆಡಳಿತ ಸಮಿತಿ ಹಾಗೂ ಎಸ್ಸೆಸ್ಸೆಫ್ ಸಂಯುಕ್ತಾಶ್ರಯದಲ್ಲಿ ಎ.14ರಂದು ರಾಜ್‌ಭಕ್ಷ ದರ್ಗಾ ಆವರಣದಲ್ಲಿ ಸುನ್ನಿ ಮಹಾ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ ಎಂದು ಎಸ್ಸೆಸ್ಸೆಫ್ ಸ್ಥಳೀಯ ಶಾಖಾಧ್ಯಕ್ಷ  ಎಸ್. ಮುಹಮ್ಮದ್ ಮುನಾವರ್ ತಿಳಿಸಿದರು. 

ಸೋಮವಾರ ಸುದ್ದಿಗೋಷ್ಠಿಯಲ್ಲಿ  ಮಾತನಾಡಿದ ಅವರು,ಎ.14 ರಂದು ಸಂಜೆ 5ಕ್ಕೆ ನಡೆಯುವ ಕಾರ್ಯಕ್ರಮವನ್ನು ಕೆ.ಎಸ್. ಆಟಕೋಯ ತಂಙಳ್ ಕುಂಬೋಳ್ ಉದ್ಘಾಟಿಸಲಿದ್ದು, ಬದ್ರಿಯ ಮಸೀದಿ ಆಡಳಿತ ಸಮಿತಿಯ ಅಧ್ಯಕ್ಷ ಎಸ್.ಮುಹಮ್ಮದ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.

ರಾತ್ರಿ 8ಕ್ಕೆ ಸಮಾರೋಪ ಸಮಾರಂಭವನ್ನು ಉಡುಪಿ,ಚಿಕ್ಕಮಗಳೂರು ಜಿಲ್ಲಾ ಸಂಯುಕ್ತ ವಿಭಾಗದ ಖಾಝಿ ಬೇಕಲ್ ಇಬ್ರಾಹೀಂ ಮುಸ್ಲಿಯಾರ್ ಉದ್ಘಾಟಿಸಲಿದ್ದು, ಎಸ್.ಮುಹಮ್ಮದ್ ಅಧ್ಯಕ್ಷತೆ ವಹಿಸಲಿದ್ದಾರೆ.ಮುಖ್ಯ ಪ್ರವಚನಕಾರರಾಗಿ ಎ.ಪಿ. ಅಬೂಬಕರ್ ಮುಸ್ಲಿಯರ್, ನಾಸಿರೇ ಮಸ್ಲಕೇ ಅಲಾ ಹಝರತ್, ಅಲ್ಲಾಮಾ ಮೌಲಾನಾ ಮುಹಮ್ಮದ್ ನಫೀಝ್ ಹಬೀಬ್ ಸಾಬ್ ದುಆಶೀರ್ವಚನ ನೀಡಲಿದ್ದಾರೆ.

ಈ ವೇಳೆ ಮುಖ್ಯ ಅತಿಥಿಗಳಾಗಿ ಬದ್ರಿಯ ಮಸೀದಿ ಧರ್ಮಗುರು ಅಬ್ದುರ್ರಹ್ಮಾನ್ ಸಖಾಫಿ, ಕಾರ್ಗಲ್ ಧರ್ಮಗುರು ಎ.ಸಿ. ಮುಹಮ್ಮದ್ ಫೈಝಿ, ಕಂದಾಯ ಸಚಿವ ಕಾಗೋಡು ತಿಮ್ಮಪ್ಪ, ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್, ಶಿಕ್ಷಣ ಸಚಿವ ತನ್ವೀರ್ ಸೇಠ್, ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ ಸಿ.ಎಂ. ಇಬ್ರಾಹೀಂ ಮತ್ತಿತರರು ಉಪಸ್ಥಿತರಿರುವರು  ಎಂದು ಅವರು ಮಾಹಿತಿ ನೀಡಿದರು.

ಈ ಸಂದರ್ಭ ಫೆಡರೇಶನ್ ಪ್ರಧಾನ ಕಾರ್ಯದರ್ಶಿ ಇಮ್ರಾನ್ ಸಾಗರ್, ಉಪಾಧ್ಯಕ್ಷ ಜಾಫರ್ ಉಳ್ಳೂರು, ಖಜಾಂಚಿ ಖಲಂದರ್, ಸದಸ್ಯರಾದ ಇಬ್ರಾಹೀಂ, ಉಬೈದುಲ್ಲಾ ಹಾಜರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News