×
Ad

ಕಲುಷಿತಗೊಂಡ ನೀರು: ವಲ್ಲಾಬಾಯಿ ರಸ್ತೆ ನಿವಾಸಿಗಳ ಆಕ್ರೋಶ

Update: 2017-04-12 16:23 IST

ಹಾಸನ, ಎ.12: ಮೂರು ತಿಂಗಳಿನಿಂದ ನಲ್ಲಿಯಲ್ಲಿ ಕಲುಷಿತಗೊಂಡ ನೀರು ಸರಬರಾಜಾಗುತ್ತಿದ್ದರೂ ಇದುವರೆಗೂ ಯಾವ ಅಧಿಕಾರಿಗಳೂ ಇದನ್ನು ಸರಿಪಡಿಸಲು ಮುಂದಾಗುತ್ತಿಲ್ಲ ಎಂದು ವಲ್ಲಾಬಾಯಿ ರಸ್ತೆ ಸುತ್ತಮುತ್ತಲ ನಿವಾಸಿಗಳು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.

ಈ ವಾರ್ಡ್ ನ ನಗರಸಭೆ ಸದಸ್ಯರಿಗೆ ನೀರಿನ ಬಗ್ಗೆ ತಿಳಿಸಿದರೂ ಕೂಡ ಇದುವರೆಗೂ ಗಮನ ನೀಡದೇ ಬೇಜವಾಬ್ದಾರಿಯುತವಾಗಿ ವರ್ತಿಸಿದ್ದಾರೆ. ಈ ನೀರನ್ನು ಕುಡಿದರೆ ಒಂದೆ ದಿನದಲ್ಲಿ ಆಸ್ಪತ್ರೆ ಸೇರುವುದು ನಿಶ್ಚಿತ. ಇಲ್ಲಿ ಇರುವ ಟ್ಯಾಂಕ್ ಸ್ವಚ್ಛತೆ ಮಾಡಿ ಎಷ್ಟೋ ವರ್ಷಗಳು ಕಳೆದಿದೆ. ಈ ಭಾಗಕ್ಕೆ ಯಗಚಿ ನೀರು ಸರಬರಾಜಾಗುತ್ತಿದ್ದು, ನೀರು ಪೂರ್ಣ ಹಾಳಾಗಿರುವುದರಿಂದ ಇದನ್ನು ಉಪಯೋಗಿಸಲು ಸಾಧ್ಯವಾಗುತ್ತಿಲ್ಲ. ತಕ್ಷಣ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ನೀರಿನ ಗುಣಮಟ್ಟವನ್ನು ಪರೀಕ್ಷಿಸಿ ಉತ್ತಮ ನೀರು ಸರಬರಾಜು ಮಾಡುವಂತೆ ಸಾರ್ವಜನಿಕರು ಆಗ್ರಹಿಸಿದರು.

ಈ ಸಂದರ್ಭ ಸ್ಥಳೀಯರಾದ ನಾಗರತ್ನ, ಪದ್ಮ, ಸುಮಿತ್ರಾ, ಲೀಲಕ್ಕ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News