ಬೆಂಗಳೂರು ಚಲೋ ಕಾರ್ಯಕ್ರಮಕ್ಕೆ ಕಾಲ್ನಡಿಗೆ ಹೊರಟ ಹೋರಾಟಗಾರರನ್ನು ಬಂಧಿಸಿದ ಪೊಲೀಸರ ಕ್ರಮ ಖಂಡನೀಯ: ಕ್ಯಾಂಪಸ್ ಫ಼್ರಂಟ್

Update: 2017-04-12 15:55 GMT

ಬೆಂಗಳೂರು ಚಲೋದಲ್ಲಿ ಭಾಗವಹಿಸಲು ರಾಜ್ಯದ ವಿವಿಧೆಡೆ ಗಳಿಂದ ಕಾಲ್ನಡಿಗೆಯಲ್ಲಿ ಹೊರಟ ಹೋರಾಟಗಾರರನ್ನು ಇಂದು ತುಮಕೂರಿನಲ್ಲಿ ಮಾತುಕತೆಯ ನೆಪವೊಡ್ದಿ ಬಂಧಿಸಿದ ಪೊಲೀಸರ ಕ್ರಮವನ್ನು ಕ್ಯಾಂಪಸ್ ಫ಼್ರಂಟ್ ಆಫ಼್ ಇಂಡಿಯಾ ರಾಜ್ಯಾದ್ಯಕ್ಷರಾದ ಮಹಮ್ಮದ್ ತಫ಼್ಸೀರ್ ತೀವ್ರವಾಗಿ ಖಂಡಿಸಿದ್ದಾರೆ.

ಹಲವಾರು ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಸಹಭಾಗಿತ್ವದಲ್ಲಿ ಭೂಮಿ, ಕ್ರಷಿ ,ಬರ ಪರಿಹಾರ,ದಲಿತ ಅಲ್ಪಸಂಖ್ಯಾತರ ಹಕ್ಕು,ಆಹಾರದ ಹಕ್ಕು ಮತ್ತು ಮಹಿಳೆಯರ ಹಕ್ಕು ಹಾಗೂ ಶಿಕ್ಷಣಕ್ಕೆ ಸಂಬಂದಪಟ್ಟ ಹತ್ತಾರು ಬೇಡಿಕಗಳನ್ನಿಟ್ಟುಕೊಂಡು ಬೆಂಗಳೂರು ಬನ್ನಪ್ಪ ಪಾರ್ಕ್ ಬಳಿ ಎಪ್ರಿಲ್ 14 ರಂದು ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿತ್ತು.

ಈ ಹೋರಾಟವನ್ನು ಬೆಂಬಲಿಸಿ ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಿಂದ ಕಾರ್ಮಿಕರು,ರೈತರು,ಮತ್ತು ಮಹಿಳೆಯರನ್ನೊಳಗೊಂಡ ಸುಮಾರು ಸಾವಿರಕ್ಕೂ ಮಿಕ್ಕಿ ಹೋರಾಟ ಗಾರರು ಕಾಲ್ನಡಿಗೆಯಲ್ಲಿ ಬರುತ್ತಿದ್ದರು.ಈಗಾಗಲೇ ಸುಮಾರು 280 ಕಿ.ಮೀ.  ಕ್ರಮಿಸಿದ್ದ ಕಾಲ್ನಡಿಗೆ ಜಾಥವನ್ನು ತುಮಕೂರು ಬಳಿ ತಡೆದ ಪೊಲೀಸರು ಬೇಡಿಕೆಗಳನ್ನು ಈಡೇರಿಸುವ ನೆಪವೊಡ್ದಿ ಮಾತುಕತೆಗೆ ಕರೆದು ನಾಯಕರನ್ನು ಮತ್ತು ಕಾರ್ಯಕರ್ತರನ್ನು ಬಂಧಿಸಿರುತ್ತಾರೆ.

ಇದು ಸರಕಾರವು ಜನರ ಹಕ್ಕುಗಳ ಪರವಾದ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನವಾಗಿದ್ದು ,ಜನರ ಬೇಡಿಕೆಗಳನ್ನು ಈಡೇರಿಸಬೇಕಾದ ಸರಕಾರವೇ ಪೊಲೀಸರ ಮೂಲಕ ಪ್ರತಿಭಟನೆಯನ್ನು ತಡೆಯುವುದು ಬಹಳ ಖಂಡನೀಯವಾಗಿದೆ.ಆದುದರಿಂದ ಮಾನ್ಯ ಮುಖ್ಯಮಂತ್ರಿಗಳು  ಕೂಡಲೇ ಮದ್ಯ ಪ್ರವೇಶಿಸಿ ಬಂಧನಕ್ಕೊಳಗಾದ ಹೋರಾಟಗಾರರನ್ನು  ಬಿಡುಗಡೆಗೊಳಿಸಬೇಕು ಮತ್ತು ಅವರ ಬೇಡಿಕೆಗಳನ್ನು ಅತೀ ಶೀರ್ಘವಾಗಿ ಈಡೇರಿಸಬೇಕೆಂದು ಕ್ಯಾಂಪಸ್ ಫ಼್ರಂಟ್ ಆಫ಼್ ಇಂಡಿಯಾ ಆಗ್ರಹಿಸುತ್ತದೆ ಎಂದು ಪ್ರಕಟನೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News