×
Ad

ಹಳೇ ದ್ವೇಷ:ವ್ಯಕ್ತಿಗೆ ಚಾಕುವಿನಿಂದ ಇರಿತ

Update: 2017-04-12 23:25 IST

ನಾಗಮಂಗಲ, ಎ.12: ಗ್ರಾಮದೇವರ ಹಬ್ಬ ಆಚರಿಸುತ್ತಿದ್ದವರ ಹಳೇ ದ್ವೇಷದ ಹಿನ್ನೆಲೆಯಲ್ಲಿ ಮಾರಾಮಾರಿ ಬಡಿದಾಡಿಕೊಂಡ ಘಟನೆಯಲ್ಲಿ ಓರ್ವ ಚಾಕು ಇರಿತದಿಂದ ಗಾಯಗೊಂಡಿದ್ದು, ಮನೆ ಸಾಮಗ್ರಿ ಮತ್ತು ಬೈಕ್ ಗೆ ಬೆಂಕಿಹಚ್ಚಿ ದಾಂಧಲೆ ನೆಡೆಸಿರುವ ಘಟನೆ ಬುಧವಾರ ತಾಲೂಕಿನ ಜಿ.ಚನ್ನಾಪುರದಲ್ಲಿ ನಡೆದಿದೆ.

 ಮಂಗಳವಾರ ರಾತ್ರಿ ನಡೆದ ಈ ಘಟನೆಯಲ್ಲಿ ರುದ್ರೇಶ್ (38)ಎಂಬಾತನ ತಲೆಯ ಭಾಗಕ್ಕೆ ಜಾಕುವಿನಿಂದ ಇರಿಯಲಾಗಿದೆ. ತಕ್ಷಣ ಆತನನ್ನು  ಆದಿಚುಂಚನಗಿರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

 ಗ್ರಾಮದೇವರ ಹಬ್ಬದಲ್ಲಿ ಇವರ ನಡುವೆ ದೇವರ ವಿಚಾರದಲ್ಲಿ ವಾಗ್ವಾದ ನಡೆದು ಆಕ್ರೋಶಗೊಂಡ ಲಕ್ಷ್ಮಣ್ ಚಾಕುವಿನಿಂದ ಇರಿದಿದ್ದಾನೆ ಎನ್ನಲಾಗಿದೆ.ಇದರಿಂದ ರೊಚ್ಚಿಗೆದ್ದ ರುದ್ರೇಶ್ ಕಡೆಯ ಒಂದು ಗುಂಪು ಲಕ್ಷ್ಮಣ್ ಮನೆಗೆ ನುಗ್ಗಿ ಮನೆಯ ಸಾಮಾಗ್ರಿ ಒಡೆದು ಹಾಕಿ ಬೈಕ್‌ಗೆ ಬೆಂಕಿ ಹಚ್ಚಿದ್ದಾರೆ.

ಗಾಯಾಳು ರುದ್ರೇಶ್ ನೋಡಲು ಆಸ್ಪತ್ರೆಗೆ ಬಂದ ಗಿಡುವಿನಹೊಸಕೊಪ್ಪಲು ಮಹದೇವು, ರಾಮಣ್ಣ, ರವಿ, ರಮೇಶ, ಬಾಬು, ಮಂಜು, ಲೋಕಿ, ಮಾದಹಳ್ಳಿ ರಾಜು, ಕೆಸುವಿನಕಟ್ಟೆ ಚಂದ್ರು ಹಾಗೂ ಲಕ್ಷ್ಮಣ್ ಇನಿತರರನ್ನು ಗ್ರಾಮಾಂತರ ಠಾಣೆ ಪೊಲೀಸರು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದಾರೆಂದು ತಿಳಿದು ಬಂದಿದೆ.

ಮುನ್ನೆಚ್ಚರಿಕೆ ಕ್ರಮವಾಗಿ ಗ್ರಾಮದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್  ಕೈಗೊಳ್ಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News