×
Ad

​ದಾವಣಗೆರೆ: ರೈತ ಆತ್ಮಹತ್ಯೆ

Update: 2017-04-12 23:26 IST

ದಾವಣಗೆರೆ, ಎ.12: ತಾಲೂಕಿನ ಹೊನ್ನೂರು ಗ್ರಾಮದ ರೈತ ಜಿ.ವಿ.ಮಂಜುನಾಥ (35) ಎಂಬವರು ಸಾಲಬಾಧೆ ತಾಳಲಾರದೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿ ಯಾಗಿದೆ.
 ಮಂಜುನಾಥ ತನ್ನ ತಂದೆಯ ಹೆಸರಿನಲ್ಲಿ ರುವ ಜಮೀನನ್ನು ಉಳುಮೆ ಮಾಡುತ್ತಿದ್ದ.

ಇದರ ಹೆಸರಿನ ಮೇಲೆಯೆ ದಾವಣಗೆರೆ ಎಸ್‌ಬಿಐನಲ್ಲಿ 1.80 ಲಕ್ಷ, ಹೊನ್ನೂರು ವಿಎಸ್‌ಎಸ್‌ಎನ್‌ನಲ್ಲಿ 80 ಸಾವಿರ, ಕೈಗಡವಾಗಿ 4.50 ಲಕ್ಷ ಸೇರಿದಂತೆ ಒಟ್ಟು 7.10 ಲಕ್ಷ ರೂ. ಸಾಲ ಮಾಡಿದ್ದ. 3 ವರ್ಷಗಳಿಂದ ಮಳೆ ಾರದ ಹಿನ್ನ್ನೆಲೆಯಲ್ಲಿ ಎ.9ರಂದು ವಿಷ ಸೇವಿಸಿದ್ದಾನೆ. ಈತನನ್ನು ಎಸ್‌ಎಸ್‌ಐ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News