ಉಪ ಚುನಾವಣೆ ಭರ್ಜರಿ ಗೆಲುವು : ಹೆಬ್ರಿಯಲ್ಲಿ ಸಂಭ್ರಮ
ಹೆಬ್ರಿ,ಎ.13 : ನಂಜನಗೂಡು ಮತ್ತು ಗುಂಡ್ಲುಪೇಟೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಜಯಗಳಿಸಿದ ಹಿನ್ನೆಲೆ ಹೆಬ್ರಿ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಕಾಂಗ್ರೆಸ್ ನಲ್ಲಿದ್ದು ಅಧಿಕಾರ ವಹಿಸಿ ಕೊನೆಗೆ ಸಿದ್ಧಾಂತ ಬಿಟ್ಟು ಪಕ್ಷ ತ್ಯಜಿಸುವವರಿಗೆ ಇದೊಂದು ತಕ್ಕ ಪಾಠವಾಗಿದೆ.ಅಡ್ಡ ದಾರಿಯಲ್ಲಿ ಮತ ಪಡೆಯುವ ಬಿಜೆಪಿಯ ಯತ್ನವನ್ನು ಮತದಾರರು ತಿರಸ್ಕರಿಸಿದ್ದಾರೆ.ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜನಪರವಾದ ಆಡಳಿತಕ್ಕೆ ಅಲ್ಲಿಯ ಜನರು ಮತ ನೀಡಿದ್ದಾರೆ ಎಂದು ಹೆಬ್ರಿ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಮುದ್ರಾಡಿ ಮಂಜುನಾಥ ಪೂಜಾರಿ ಹೇಳಿದರು.
ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುಜಾತ ಲಕ್ಷ್ಮಣ್,ಚಾರ ಪಂಚಾಯತ್ ಅಧ್ಯಕ್ಷ ಸಂದೀಪ್, ಪಕ್ಷದ ಪ್ರಮುಖರಾದ ಶಶಿಕಲಾ ಆರ್.ಪಿ., ಸುಮಿತ್ರಾ ಹೆಗ್ಡೆ, ಗಾಯತ್ರಿ, ಶೀನಾ ಪೂಜಾರಿ, ಎಚ್.ಜನಾರ್ದನ್, ಶಶಿಕಲಾ ಡಿ.ಪೂಜಾರಿ, ಸುರೇಶ್ ಶೆಟ್ಟಿ, ಸುರೇಶ್ ಭಂಡಾರಿ,ಸಂತೋಷ ಹೆಗ್ಡೆ, ನಿತೀಶ್ ಎಸ್.ಪಿ. ಪೂಜಾರಿ, ಶೇಖರ ಬಂಗೇರ, ಬೋಜ ಪೂಜಾರಿ, ದಿನೇಶ್ ಶೆಟ್ಟಿ, ಶೇಖರ ನ್‌ಕಾ, ನೀಲೇಶ್, ಸುಮಂತ್ ಹೆಗ್ಡೆ, ವಸಂತ , ಪ್ರದೀಪ್ ಹೆಗ್ಡೆ, ಅಕ್ಷಯ್ ಪೂಜಾರಿ ಮತ್ತಿತರರು ಇದ್ದರು.