ಡಾ.ಬಿ.ಆರ್.ಅಂಬೇಡ್ಕರ್, ಜಗಜೀವನ ರಾಮ್ ಜನ್ಮದಿನಾಚರಣೆ

Update: 2017-04-14 16:18 GMT

ಮುಂಡಗೋಡ,ಎ.14:  ತಾಲೂಕು ಆಡಳಿತ, ತಾಪಂ, ಸಮಾಜ ಕಲ್ಯಾಣ ಇಲಾಖೆ, ಪಪಂ, ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ಸಂಯುಕ್ತಾಶ್ರಯದಲ್ಲಿ  ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಜಗಜೀವನ ರಾಮ್ ಅವರ ಜನ್ಮದಿನಾಚರಣೆಯ ಕಾರ್ಯಕ್ರಮವು ಶುಕ್ರವಾರ ವಿವೇಕಾನಂದ ಬಯಲು ರಂಗ ಮಂದಿರದಲ್ಲಿ ನಡೆಯಿತು.

ಅಂದು ಬೆಳಗ್ಗೆ ಡಾ. ಬಿ.ಆರ್ ಅಂಬೇಡ್ಕರ ಹಾಗೂ ಡಾ ಜಗಜೀವನರಾಮ್ ಅವರ ಭಾವಚಿತ್ರದೊಂದಿಗೆ ಹೊರಟು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮರೆವಣಿಗೆ ನಡೆಸಿ ಬಳಿಕ ವಿವೇಕಾನಂದ ಬಯಲು ರಂಗ ಮಂದಿರಕ್ಕೆ ತಲುಪಿತು.

ಜಿಪಂ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿಯ ಅಧ್ಯಕ್ಷ ಎಲ್.ಟಿ.ಪಾಟೀಲ ಮಾತನಾಡಿ, ಮಹಾನ್ ವ್ಯಕ್ತಿಗಳ ಆದರ್ಶಗಳನ್ನು ನಾವು ಜೀವನದಲ್ಲಿ ಅಳವಡಿಸಿಕೊಳ್ಳಬೇಕು.ಮಹಾನ್ ನಾಯಕರ ಜನ್ಮ ದಿನಾಚರಣೆಗೆ ಬೆರಳೆಣಿಕೆಯಷ್ಟೇ ಜನ ಸೇರುವುದು ಉತ್ತಮ ಬೆಳವಣಿಗೆಯಲ್ಲ ಎಂದು ವಿಷಾದಿಸಿದರು.

ಎಸ್.ಫಕ್ಕಿರಪ್ಪ, ಅಶೋಕ ಚಲವಾದಿ, ಚಿದಾನಂದ ಹರಿಜನ, ಹನಮಂತ ಆರೇಗೊಪ್ಪ ಮಾತನಾಡಿದರು.

ಜಿ.ಪಂ ಸದಸ್ಯೆ ಜಯಮ್ಮ ಕೃಷ್ಣ ಹಿರೇಹಳ್ಳಿ, ತಾಪಂ ಅಧ್ಯಕ್ಷೆ ದ್ರಾಕ್ಷಾಯಿಣಿ ಸುರಗಿಮಠ, ತಹಶೀಲ್ದಾರ್ ಅಶೋಕ ಗುರಾಣಿ, ಪಪಂ ಅಧ್ಯಕ್ಷ ರಫೀಕ್ ಇನಾಮದಾರ, ಉಪಾಧ್ಯಕ್ಷ ಫಕ್ಕೀರಪ್ಪ ಅಂಟಾಳ, ತಾಪಂ ಕಾರ್ಯನಿರ್ವಹಣಾಧಿಕಾರಿ ಬಿ.ಎಲ್.ಭೈರವಾಡಗಿ, ನ್ಯಾಯವಾದಿ ಸಂಘದ ಅಧ್ಯಕ್ಷ ಗುಡ್ಡಪ್ಪ ಕಾತೂರ, ಕ್ಷೇತ್ರ ಶಿಕ್ಷಣಾಧಿಕಾರಿ ವೈ.ಬಿ.ಬಾದವಾಡಗಿ, ಪಿ.ಎಸ್.ಐ  ಲಕ್ಕಪ್ಪ ನಾಯ್ಕ, ಎನ್.ಡಿ.ಕಿತ್ತೂರ, ಶಾರದಾ ರಾಠೋಡ ರಮಾಬಾಯಿ ಕುದಳೆ, ದಲಿತ ಮುಖಂಡ ಕೃಷ್ಣ ಹಿರೇಹಳ್ಳಿ ,ಸಮಾಜ ಕಲ್ಯಾಣಧಿಕಾರಿ ಮಂಜುನಾಥ ಸಾಳುಂಕೆ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News