ದಲಿತ ಸಂಘರ್ಷ ಸಮಿತಿಯ ಹಿರಿಯ ಹೋರಾಟಗಾರ ಚೆಂಡೂರು ವೆಂಕಟೇಶ್ ನಿಧನ
Update: 2017-04-14 22:37 IST
ಬಾಗೇಪಲ್ಲಿ, ಎ.14: ಜಿಪಂ ಮಾಜಿ ಉಪಾಧ್ಯಕ್ಷ ಹಾಗೂ ದಲಿತ ಸಂಘರ್ಷ ಸಮಿತಿ ಹಿರಿಯ ಹೋರಾಟಗಾರ ಚೆಂಡೂರು ವೆಂಕಟೇಶ್ ಸ್ವಗೃಹದಲ್ಲಿ ನಿಧನರಾದರು.
1980ರ ದಶಕದಿಂದಲೂ ತಮ್ಮ ವಿದ್ಯಾರ್ಥಿದೆಸೆಯಲ್ಲಿ ದಲಿತ ಪರ ಚಳುವಳಿ, ಹೋರಾಟಗಳಲ್ಲಿ ಚೆಂಡೂರು ವೆಂಕಟೇಶ್ ಮುಂಚೂಣಿಯಲ್ಲಿದ್ದರು. ಕೋಲಾರ ಅವಿಭಜಿತ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ಗ್ರಾಮಗಳಲ್ಲಿ ಹಿರಿಯ ದಲಿತನಾಯಕರ ಜೊತೆಯಲ್ಲಿ, ದಲಿತ ಸಂಘಟನೆ ಕಟ್ಟಿ ಅನೇಕ ಹೋರಾಟಗಳಲ್ಲಿ ಭಾಗಿಯಾಗಿದ್ದರು. ಅನೇಕ ಕ್ರಾಂತಿಗೀತೆಗಳನ್ನು ಹಾಡಿ, ಜನಜಾಗೃತಿ ಮೂಡಿಸುತ್ತಿದ್ದರು. ಗುಡಿಬಂಡೆ ತಾಲ್ಲೂಕಿನ ಬೀಚಗಾನಹಳ್ಳಿ ಜಿಪಂ ಕ್ಷೇತ್ರಕ್ಕೆ ಆಯ್ಕೆಯಾದ ಚೆಂಡೂರು ವೆಂಕಟೇಶ್ ಸುಮಾರು 18 ತಿಂಗಳುಗಳ ಕಾಲ ಜಿಪಂ ಸದಸ್ಯ ಹಾಗೂ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.