×
Ad

ಸಾಮಾಜಿಕ ಪರಿವರ್ತನಕಾರ ಅಂಬೇಡ್ಕರ್: ಮುರುಘಾ ಶರಣರು

Update: 2017-04-14 23:17 IST

 ಚಿತ್ರದುರ್ಗ, ಎ. 14: ಸಾಮಾಜಿಕ ಸಮಾನತೆ ಹಾಗೂ ಅಸ್ಪಶ್ಯತೆ ವಿರುದ್ಧ ಹೋರಾಡಿದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಸಾಮಾಜಿಕ ಪರಿವರ್ತಕರಾಗಿದ್ದಾರೆ ಎಂದು ಡಾ.ಶಿವಮೂರ್ತಿ ಮುರುಘಾ ಶರಣರು ತಿಳಿಸಿದ್ದಾರೆ.

ಡಾ. ಬಿ.ಆರ್. ಅಂಬೇಡ್ಕರ್ ಜನ್ಮದಿನಾಚರಣೆ ಹಾಗೂ ಬೇಸಿಗೆ ಮತ್ತು ಬರಗಾಲದ ಹಿನ್ನೆಲೆಯಲ್ಲಿ ಮಠದ ವತಿಯಿಂದ ದಿನನಿತ್ಯ ಮಜ್ಜಿಗೆ ವಿತರಣಾ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಮಾನತೆಯ ಸಮಾಜ ನಿರ್ಮಿಸುವಲ್ಲಿ ಅಂಬೇಡ್ಕರ್ ಅಪಾರವಾದ ಪರಿಶ್ರಮ ವಹಿಸಿದ್ದಾರೆ. ಸಾಮಾಜಿಕ, ಮಾನಸಿಕ, ದೈಹಿಕ ನೋವುಗಳನ್ನು, ಅವಮಾನಗಳನ್ನು ಅನುಭವಿಸಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಡಾ. ಬಿ.ರಾಜಶೇಖರಪ್ಪ, ಕಸಾಪ ಮಾಜಿ ಅಧ್ಯಕ್ಷ ಆರ್.ಮಲ್ಲಿ ಕಾರ್ಜುನಯ್ಯ, ಪತ್ರಕರ್ತ ಉಜ್ಜನಪ್ಪ, ಮುರುಘರಾಜೇಂದ್ರ ಒಡೆಯರ್, ಶೇಷಣ್ಣ ಕುಮಾರ್, ಜಿ.ಪಂ. ಮಾಜಿ ಉಪಾಧ್ಯಕ್ಷ ಎಲ್.ಬಿ. ರಾಜಶೇಖರ್, ಖಾಸಿಂ ಅಲಿ, ಡಾ. ಈ.ಚಿತ್ರಶೇಖರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News